ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮತ ಎಣಿಕೆ ದಿನವೇ ತಹಶೀಲ್ದಾರ ಕಚೇರಿ ಸಿಬ್ಬಂದಿಗೆ ಕೋವಿಡ್

ಕುಂದಗೋಳ : ಮತ ಎಣಿಕೆ ಕೇಂದ್ರಕ್ಕೆ ಬಂದವರೇ, ಸಾರ್ವಜನಿಕರೇ, ಈಗಾಗಲೇ ಗ್ರಾಪಂ ಗೆದ್ದ ಅಭ್ಯರ್ಥಿಗಳೇ ಅವರ ಹಿಂಬಾಲಕರೇ ಹುಷಾರ್ ! ಹುಷಾರ್ ! ಹುಷಾರ್ !

ಇದೇನ್ರಿ ? ಯಾಕ್ ಹುಷಾರ್ ಅನ್ನಾಕುಂತರೀ ಅಂತಿರೇನು ? ಇವತ್ತ್ ಅಂದ್ರ ಗ್ರಾಪಂ ಚುನಾವಣೆ ಮತ ಎಣಿಕೆ ದಿನವೇ ಕುಂದಗೋಳ ತಹಶೀಲ್ದಾರ ಕಚೇರಿ ಸಿಬ್ಬಂದಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಆಗೇತಿ.

ತಹಶೀಲ್ದಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಒಬ್ಬರಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದು, ತಹಶೀಲ್ದಾರ ಸೇರಿದಂತೆ ಸಂಪೂರ್ಣ ಕಚೇರಿ ಸಿಬ್ಬಂದಿಗಳು ಕೋವಿಡ್ ಪರೀಕ್ಷೆ ಒಳಗಾಗುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ನೀವೂ ಗ್ರಾಪಂ ಪಂಚಾಯತಿ ಮತ ಎಣಿಕೆ ಫಲಿತಾಂಶ ಕಾಯುತ್ತಾ, ಈ ಪಾಟಿ ಜನ ಜಾತ್ರೆ ಮಾಡೀರಿ ಇನ್ನಮ್ಯಾಗ ಸಂಭ್ರಮಾಚರಣೆ ಮಾಡ್ತಿರಿ, ದಯವಿಟ್ಟು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಸೇರಿಕೊಳ್ಳಿ ತಹಶೀಲ್ದಾರ ಕಚೇರಿ ಸಿಬ್ಬಂದಿಗೆ ಮತ ಎಣಿಕೆ ದಿನವೇ ಕೊರೊನಾ ವೈರಸ್ ಪತ್ತೇಯಾಗಿದೆ‌.

Edited By : Manjunath H D
Kshetra Samachara

Kshetra Samachara

30/12/2021 01:50 pm

Cinque Terre

40.75 K

Cinque Terre

1

ಸಂಬಂಧಿತ ಸುದ್ದಿ