ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೊರೊನಾ ನಿಯಮ ಗಾಳಿಗೆ ತೂರಿದ ಗ್ರಾಪಂ ನಾಮಿನೇಷನ್

ಕುಂದಗೋಳ : ಗ್ರಾಮ ಗ್ರಾಮಗಳ ಆಖಾಡ ಎಂದೇ ಹೆಗ್ಗಳಿಕೆಯ ಗ್ರಾಮ ಪಂಚಾಯಿತಿ ಚುನಾವಣೆಯ ಕಸರತ್ತು ಈ ಹಳ್ಳಿಗಳಲ್ಲಿ ತುಸು ಜೋರಾಗಿಯೆ ನಡೆದಿದೆ.

ಈಗಾಗಲೇ ಕುಂದಗೋಳ ತಾಲೂಕಿನ 23 ಗ್ರಾಮ ಪಂಚಾಯಿತಿಗಳಲ್ಲಿ ಜಿಲ್ಲೆಯ ಎರಡನೇ ಹಂತದ ಅಭ್ಯರ್ಥಿಗಳ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದ್ದು, ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕೊರೊನಾ ನಿಯಮ ಉಲ್ಲಂಘನೆ ಕಂಡು ಬರುತ್ತಿದೆ.

ನಿನ್ನೆ ಶುಕ್ರವಾರ ಇಂದು ಸೇರಿ ನಾಮಿನೇಷನ್ ಮಾಡಿದ ಬಹತೇಕ ಅಭ್ಯರ್ಥಿಗಳು ಹಾಗೂ ಅವರ ಸಹಚರರು ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಗೊಡವೆಯನ್ನೆ ಮರೆತಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಚುನಾವಣಾ ರಿಟರ್ನಿಂಗ್ ಆಫಿಸರ್ ಧ್ವನಿ ಎತ್ತಿದರೂ ಪಂಚಾಯಿತಿ ಒಳಗೆ ಜನರ ಗದ್ದಲದ ಪರಿಣಾಮ ಆ ಬಗ್ಗೆ ಗಮನಿಸುವವರೇ ಇಲ್ಲದಾಗಿದೆ. ಇನ್ನು ಯಾವ ಪಂಚಾಯಿತಿಯಲ್ಲೂ ಸಾಮಾಜಿಕ ಅಂತರದ ಬಾಕ್ಸ್ ಹಾಕಿಲ್ಲ. ಸ್ಯಾನಿಟೈಜರ್ ಬಾಟಲ್ ಹೆಸರೆ ಮರೆತಂತಾಗಿದೆ.

ಚಿಹ್ನೆಗಳ ಆಯ್ಕೆ, ಮನೆ ಕರ, ಶೌಚಾಲಯ ಫಾರ್ಮ್, ಭರ್ತಿ ಸೇರಿದಂತೆ ಇತರೆ ಕೆಲಸದಲ್ಲಿ ನಿರತ ಜನರು ಕೊರೊನಾ ನಿಯಮ ಗಾಳಿಗೆ ತೂರಿದ್ದು ಪಂಚಾಯಿತಿ ಚುನಾವಣೆ ಮತ್ತೆ ಕೊರೊನಾ ಎರಡನೇ ಹಾವಳಿ ಸೃಷ್ಟಿಸುತ್ತಾ ಎಂಬ ಮಾತು ಕೇಳಿ ಬರುತ್ತಿವೆ.

ಊರಿನ ಅಭಿವೃದ್ಧಿಗೆ ಮುಂದಾಗೋ ಜನತೆ ಮಾಸ್ಕ್ ಸಾಮಾಜಿಕ ಅಂತರ ಪಾಲಿಸಿ ಎಂಬುದು ಪಬ್ಲಿಕ್ ನೆಕ್ಷ್ಟ ಆಶಯ.

Edited By :
Kshetra Samachara

Kshetra Samachara

12/12/2020 06:21 pm

Cinque Terre

37.99 K

Cinque Terre

0

ಸಂಬಂಧಿತ ಸುದ್ದಿ