ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಿಎಫ್ಐ ಬ್ಯಾನ್ ಮಾಡಿದ್ದಕ್ಕೆ ಸಿದ್ದರಾಮಯ್ಯ ಒಳಗೊಳಗೆ ಕುದಿಯುತ್ತಿದ್ದಾರೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಪಿಎಫ್‌ಐ ಬ್ಯಾನ್ ಮಾಡಿದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಒಳಗೊಳಗೆ ಕುದಿಯುತ್ತಿದೆ. ಪಿಎಫ್ಐ ದಾಳಿ ವೇಳೆ ಅನೇಕ ದಾಖಲೆಗಳು ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಅವರು ವಿರೋಧ ಮಾಡಲು ಹಿಂಜರಿಯುತ್ತಿದ್ದಾರೆಂದು. ಹೀಗಾಗಿ ಆರ್‌ಎಸ್‌ಎಸ್‌ಅನ್ನು ಕೂಡಾ ಬ್ಯಾನ್ ಮಾಡಲು ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪಿಎಫ್ಐ ಬ್ಯಾನ್ ಮಾಡಿದನ್ನು ವಿರೋಧಿಸಿ ಮಾತನಾಡಿದರೇ ಎಲ್ಲಿ ಜನರು ತಮ್ಮನ್ನು ತಿರಸ್ಕಾರ ಮಾಡುತ್ತಾರೆಂಬ ಭಯದಲ್ಲಿ ಆರ್‌ಎಸ್‌ಎಸ್ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ ಎಂದರು.

ಆರ್‌ಎಸ್‌ಎಸ್‌ಅನ್ನು ಕಾಂಗ್ರೆಸ್ ಈ ಹಿಂದೆ ಮೂರು ಬಾರಿ ಬ್ಯಾನ್ ಮಾಡಿದೆ. ಆದರೂ ಆರ್‌ಎಸ್‌ಎಸ್‌ಅನ್ನು ಏನೂ ಮಾಡಲು ಆಗಿಲ್ಲ. ಆರ್.ಎಸ್.ಎಸ್ ಎಂದರೆ ನಾವೇ, ದೇಶದ ಪ್ರಧಾನಿಗಳೇ ಆರ್‌ಎಸ್‌ಎಸ್‌ನಿಂದಲೇ ಬಂದವರು. ಹೀಗಾಗಿ ಪಿಎಫ್ಐ ಬ್ಯಾನ್ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ವಿರೋಧ ಮಾಡಲು ಆಗದೇ ಆರ್‌ಎಸ್‌ಎಸ್‌ ಬ್ಯಾನ್ ಮಾಡಬೇಕೆಂದು ಹೇಳುತ್ತಿದ್ದಾರೆ ಎಂದು ಜೋಶಿ ಅವರು ಸಿದ್ದರಾಮಯ್ಯ ಮೇಲೆ ಕಿಡಿ ಕಾರಿದ್ದಾರೆ.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/09/2022 05:27 pm

Cinque Terre

72.15 K

Cinque Terre

9

ಸಂಬಂಧಿತ ಸುದ್ದಿ