ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸಿದ್ದ; ಶಶಿ ನಿಂಬಣ್ಣವರ ಸ್ಪಷ್ಟನೆ

ಕಲಘಟಗಿ: ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಲಘಟಗಿ ಮತ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಛಬ್ಬಿ ಇಬ್ಬರು ಪೈಪೋಟಿ ನಡೆಸಿದ್ದಾರೆ.

ಆದರೆ ಬಿಜೆಪಿ ಪಕ್ಷದಲ್ಲಿ ಇದುವರೆಗೂ ಯಾರು ಬಹಿರಂಗ ಹೇಳಿಕೆ ನೀಡಿರಲಿಲ್ಲ. ಆದರೆ ಈಗ ಒಬ್ಬ ಅಭ್ಯರ್ಥಿಯ ಹೆಸರು ಕೇಳಿಬರುತ್ತಿದೆ. ಹಾಲಿ ಶಾಸಕರಾದ ಸಿ ಎಂ ನಿಂಬಣ್ಣವರ ಅವರ ಪುತ್ರ ಶಶಿ ನಿಂಬಣ್ಣವರ ಇವರು ಪಕ್ಷದ ಟಿಕೆಟ್ ಆಕಾಂಕ್ಷಿ ಯಾಗಿದ್ದು, ಪಕ್ಷ ಟಿಕೆಟ್ ನೀಡಿದರೆ ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಇವರು ತಂದೆಯ ಗೆಲುವಿಗಾಗಿ ಬಹಳಷ್ಟು ಶ್ರಮವಹಿಸಿದ್ದು, ಗೆಲುವಿನ ನಂತರ ತಮ್ಮ ಕಾರ್ಯ ವೈಕರಿಯಲ್ಲಿ ತೊಡಗಿಕೊಂಡಿದ್ದರು. ತಾಲೂಕಿನಲ್ಲಿ ಇವರು ತಮ್ಮ ಒಡನಾಟ ಇಟ್ಟುಕೊಂಡು ತಂದೆಯವರ ಜೊತೆ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸಿದ ಇವರಿಗೆ ಕ್ಷೇತ್ರದ ಜನತೆ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ.

ತಾಲೂಕಿನ ಜನತೆಗೆ ಮುಂದಿನ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಒಬ್ಬ ಅಭ್ಯರ್ಥಿ ಬಹಿರಂಗವಾಗಿ ಹೊರಹೊಮ್ಮಿದ್ದು ಪಕ್ಷದ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.

ವರದಿ: ಉದಯ ಗೌಡರ

Edited By : Somashekar
Kshetra Samachara

Kshetra Samachara

14/09/2022 04:56 pm

Cinque Terre

22.17 K

Cinque Terre

9

ಸಂಬಂಧಿತ ಸುದ್ದಿ