ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ರಾಜ್ಯದಲ್ಲೇ ಬೃಹತ್ ಮಹಾನಗರ ಪಾಲಿಕೆ ಇದು. ಬರೋಬ್ಬರಿ 82 ವಾರ್ಡ್‌ಗಳನ್ನು ಈ ಮಹಾನಗರ ಪಾಲಿಕೆ ಹೊಂದಿದೆ. ಹಲವಾರು ವಿಷಯಗಳನ್ನು ಇಟ್ಟುಕೊಂಡು ಪ್ರತಿ ತಿಂಗಳು ಪಾಲಿಕೆ ಸದಸ್ಯರ ಸಾಮಾನ್ಯ ಸಭೆ ನಡೆಯುತ್ತದೆ. ಆದ್ರೆ ಆ ಸಾಮಾನ್ಯ ಸಭೆ ಕೇವಲ ನಾಲ್ಕೈದು ಸದಸ್ಯರಿಗೆ ಮಾತ್ರ ಸೀಮಿತವಾಗಿದೆಯಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಹೌದು… ಅವಳಿನಗರದಲ್ಲಿನ ಕುಂದು ಕೊರತೆ ಬಗ್ಗೆ ತಿಳಿದುಕೊಂಡು ಬಗೆಹರಿಸಲು ಮತ್ತು ತಾವುಗಳು ಚುನಾಯಿತಗೊಂಡಿರುವ ವಾರ್ಡ್‌ಗಳ ಸಮಸ್ಯೆ ಬಗ್ಗೆ ಧ್ವನಿ ಎತ್ತಿ, ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ, ಮಹಾನಗರ ಪಾಲಿಕೆ ಸದಸ್ಯರು ಅಧಿಕಾರಿಗಳು ಸೇರಿಕೊಂಡು ಸಾಮಾನ್ಯ ಸಭೆ ಮಾಡುತ್ತಾರೆ. ಆದ್ರೆ ಈ ಸಾಮಾನ್ಯ ಸಭೆ ಕೇವಲ ನಾಲ್ಕೈದು ಸದಸ್ಯರಿಗೆ ಮಾತ್ರ ಸೀಮಿತವಾಗಿದೆ ಎನ್ನುವಂತಾಗಿದೆ. ಅಂದ್ರೆ ಎಲ್ಲ ಸಮಸ್ಯೆಗಳ ಬಗ್ಗೆ ಅವರಷ್ಟೇ ಧ್ವನಿ ಎತ್ತಬೇಕಾಗಿದೆ. ಇನ್ನುಳಿದ ಸದಸ್ಯರು ಇಲ್ಲಿ ಏನು ನಡೆಯುತ್ತಿದೆ. ನಾವು ಏನು ಮಾತನಾಡಬೇಕು ಎನ್ನುವುದೇ ಅರಿಯದಂತಾಗಿದೆ.
ಕಳೆದ ಎರಡ್ಮೂರು ತಿಂಗಳ ಹಿಂದೆ ಎಲ್ಲ ಸದಸ್ಯರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆದ್ರೆ ಏನು ಪ್ರಯೋಜನ? ಸಾಮಾನ್ಯ ಸಭೆ ನಡೆದರೂ ಕೂಡ, ತಮ್ಮ ವಾರ್ಡ್ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಮಹಾನಗರ ಪಾಲಿಕೆಯಲ್ಲಿ ಆಡಳಿತ ಪಕ್ಷವಾಗಿ ಬಿಜೆಪಿ, ವಿರೋಧ ಪಕ್ಷವಾಗಿ ಕಾಂಗ್ರೆಸ್ ಇದೆ. ಎಐಎಮ್ಐಎಮ್ ಸೇರಿದಂತೆ ಸ್ವತಂತ್ರ ಸದಸ್ಯರು ಕೂಡ ಇದ್ದಾರೆ. ಆದ್ರೆ ಆಡಳಿತ ಪಕ್ಷದಿಂದ ಕೆಲವರು, ವಿರೋಧ ಪಕ್ಷದಿಂದ ಕೆಲವರು ಸದಸ್ಯರು ಮಾತ್ರ, ಸಾಮಾನ್ಯ ಸಭೆಯಲ್ಲಿ ಎದ್ದು ನಿಂತು ಮಾತನಾಡುತ್ತಾರೆ. ಇನ್ನು ಹಿಂದೆ ಕುಳಿತ ಹಲವಾರು ಸದಸ್ಯರು ಯಾಕೆ ತಮ್ಮ ವಾರ್ಡ್ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಸಭೆಯಲ್ಲಿ ಮಾತನಾಡಿದರೆ ಏನಾದರು ಎಡವಟ್ಟು ಆಗುತ್ತದೆ ಎಂಬ ಭಯವೇ ಅನ್ನೋದು ಹಲವರ ಪ್ರಶ್ನೆ.
ಒಟ್ಟಿನಲ್ಲಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಹೆಸರಿಗಷ್ಟೇ ನಡೆಯುತ್ತಿದೆ. ಸಮಸ್ಯೆ ಬಗ್ಗೆ ಹೆಚ್ಚಿನ ಸದಸ್ಯರು ಧ್ವನಿ ಎತ್ತುತ್ತಿಲ್ಲ. ಹಲವು ಮಹಿಳಾ ಸದಸ್ಯರಿಗೆ ಇಲ್ಲೇನು ನಡೆಯುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ಹಾಗಾಗಿ ಇನ್ಮುಂದೆಯಾದರೂ ಎಲ್ಲ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ನಿಮ್ಮ ಮತದಾರರ ಸಮಸ್ಯೆ ಬಗೆ ಹರಿಸಬೇಕಾಗಿದೆ ಎಂಬುದು ಪ್ರಜ್ಞಾವಂತರ ಒತ್ತಾಸೆಯಾಗಿದೆ....
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
14/09/2022 01:23 pm