ಹುಬ್ಬಳ್ಳಿ: ಗಮನ ಸೆಳೆಯುವ ಸೂಚನೆಯ ಹಿನ್ನೆಲೆಯಲ್ಲಿ ಸದಸ್ಯರ ನಡುವೆ ಸಭೆಯಲ್ಲಿಯೇ ವಾಗ್ವಾದ ನಡೆದಿದ್ದು, ಈ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮೇಯರ್ ಈರೇಶ ಅಂಚಟಗೇರಿ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಗಮನ ಸೆಳೆಯುವ ಸೂಚನೆಯ ಮೇಲೆ ನಡೆಯುತ್ತಿರುವ ಚರ್ಚೆಯಲ್ಲಿ ನಗರದ ಸ್ವಚ್ಛತೆ, ಕಸ ವಿಲೇವಾರಿ ಬಗ್ಗೆ ವಾಗ್ವಾದ ನಡೆದಿದೆ.
ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಪರಸ್ಪರ ವಾಗ್ದಾಳಿ ನಡೆಯಿತಾದರೂ ಇದುವರೆಗೆ ಈದ್ಗಾ ಮೈದಾನದಲ್ಲಿ ಶ್ರೀ ಗಣೇಶ ಪ್ರತಿಷ್ಠಾಪನೆ ವಿಚಾರ ಚರ್ಚೆಗೆ ಬಂದಿಲ್ಲ.
Kshetra Samachara
25/08/2022 03:48 pm