ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಫಲಾನುಭವಿಗಳಿಗೆ ಋಣಮುಕ್ತ ಪತ್ರ ವಿತರಣೆ: ಪಶ್ಚಿಮ ಕ್ಷೇತ್ರದ ಶಾಸಕರ ಕಾರ್ಯಕ್ಕೆ ಶ್ಲಾಘನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ಶಹರದ ತಾರಿಹಾಳ 2ನೇ ಹಂತ ರಾಮನಗರ ಆಶ್ರಯ ಬಡಾವಣೆಯಲ್ಲಿ ಸುಮಾರು 18 ವರ್ಷಗಳಿಂದ ವಾಸಿಸುತ್ತಿರುವ ಅರ್ಹ ಬಡ ಫಲಾನುಭವಿಗಳಿಗೆ ಅಡಮಾನ ಋಣಮುಕ್ತ ಪತ್ರಗಳನ್ನು ವಿತರಿಸಲಾಯಿತು.

ಶಾಸಕ ಅರವಿಂದ ಬೆಲ್ಲದ ಅವರು ಅರ್ಹ ಫಲಾನುಭವಿಗಳಿಗೆ ಅಡಮಾನ ಋಣಮುಕ್ತ ಪತ್ರಗಳನ್ನು ವಿತರಣೆ ಮಾಡುವ ಮೂಲಕ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದಾರೆ.

ಈ ಸಂದರ್ಭದಲ್ಲಿ ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ ರಾಜು ಕೋಟೆನವರ, ಮಂಡಲ ಅಧ್ಯಕ್ಷರಾದ ಬಸವರಾಜ ಗರಗ ಭಾಗವಹಿಸುವ ಮೂಲಕ ಫಲಾನುಭವಿಗಳ ಕನಸನ್ನು ನನಸಾಗಿಸಿದ್ದಾರೆ.

Edited By :
Kshetra Samachara

Kshetra Samachara

22/08/2022 05:28 pm

Cinque Terre

71.03 K

Cinque Terre

0

ಸಂಬಂಧಿತ ಸುದ್ದಿ