ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: 'ಹರ್ ಘರ್ ತಿರಂಗಾ' ಕಾರ್ಯಕ್ರಮ ಧ್ವಜ ವಿತರಿಸಿದ ತಹಶೀಲ್ದಾರ್

ಕುಂದಗೋಳ: 75ನೇ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ್ ನೇತೃತ್ವದಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಧ್ವಜ ವಿತರಣೆ ಕಾರ್ಯಕ್ರಮ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನೆರವೇರಿತು.

ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಉಪ ತಹಶೀಲ್ದಾರ್ ಎಸ್.ಎನ್‌.ನರಸಪ್ಪನವರ ಹಾಗೂ ಕಂದಾಯ ನಿರೀಕ್ಷಕ ಅಶೋಕ್ ಮಲ್ಲೂರ ಅವರ ನೇತೃತ್ವದಲ್ಲಿ ಧ್ವಜ ವಿತರಣೆ ಮಾಡಲಾಯಿತು. ರಿಯಾಯಿತಿ ದರದಲ್ಲಿ ಧ್ವಜ ಪಡೆದ ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಕುಂದಗೋಳ ತಾಲೂಕು ಪಂಚಾಯಿತಿ ವ್ಯಾಪ್ತಿಯ 26 ಗ್ರಾಮ ಪಂಚಾಯಿತಿ ಪ್ರತಿ ಹಳ್ಳಿಗರು ಅವರು ತಮ್ಮ ಮನೆ ಮೇಲೆ ಧ್ವಜ ಹಾರಿಸಲು ಅವರು ಸೂಚಿಸಿದರು.

ಈ ವೇಳೆ ರಿಯಾಯಿತಿ ದರ 25 ರೂಪಾಯಿ ವೆಚ್ಚದಲ್ಲಿ ಒಂದು ಧ್ವಜವನ್ನು ಸಾರ್ವಜನಿಕರಿಗೆ ವಿತರಿಸುವ ಯೋಜನೆಯನ್ನು ತಹಶೀಲ್ದಾರ್ ತಿಳಿಸಿದರು.

Edited By : Somashekar
Kshetra Samachara

Kshetra Samachara

12/08/2022 05:12 pm

Cinque Terre

24.08 K

Cinque Terre

0

ಸಂಬಂಧಿತ ಸುದ್ದಿ