ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಜ್ಞಾತವಾಸ ಮುಗಿದರೂ ಆರಂಭವಾಗದ ಯೋಜನೆ: ಪ್ರತ್ಯೇಕ ಪೊಲೀಸ್ ಠಾಣೆ ಕನಸು ನೆನೆಗುದಿಗೆ...!

ಹುಬ್ಬಳ್ಳಿ: ಅದು ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾಗಿದ್ದ ಯೋಜನೆ. ಅಜ್ಞಾತವಾಸ ಮುಗಿದರೂ ಕೂಡ ಯೋಜನೆ ಆರಂಭವಾಗಿಲ್ಲ. 14 ವರ್ಷದಿಂದ ಮಹತ್ವದ ಬೇಡಿಕೆಯೊಂದು ನೆನೆಗುದಿಗೆ ಬಿದ್ದಿದೆ. ಹೌದು ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಹಾಗೂ ನಗರಸಭೆಗಳಲ್ಲಿ ಪ್ರತ್ಯೇಕ ಪೊಲೀಸ್ ದಳ ಸ್ಥಾಪಿಸಬೇಕೆಂದು 2004 ರಲ್ಲಿ ಎಸ್‌.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರಕಾರ ಚಿಂತನೆ ನಡೆಸಿತ್ತು.‌ ಅದರಂತೆ ಎಲ್ಲ ಮಹಾನಗರ ಪಾಲಿಕೆ ಮತ್ತು ನಗರಸಭೆಗಳಿಗೆ ಪತ್ರ ಬರೆದು ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರಕಾರ ಸೂಚಿಸಿತ್ತು‌.

ಸರ್ಕಾರದ ಆದೇಶದಂತೆ ಎಲ್ಲ ಪಾಲಿಕೆ ಹಾಗೂ ನಗರಸಭೆಗಳು ಸಾಮಾನ್ಯ ಸಭೆಯಲ್ಲಿ ಪ್ರತ್ಯೇಕ ಪೊಲೀಸ್ ದಳ ಸ್ಥಾಪನೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿ ಪ್ರತ್ಯೇಕ ಪೊಲೀಸ್‌ ದಳ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದವು. ಈ ಸಂಬಂಧ ಎಂಟು ಜನರ ಸಮಿತಿ ಸಹ ರಚಿಸಿ ವಿಸ್ತೃತ ವರದಿ ಸಲ್ಲಿಸಲು ಸೂಚನೆ ನೀಡಿತ್ತು. ಅದರಂತೆ ಒಂದೆರಡು ಬಾರಿ ಮಾತ್ರ ಸಭೆ ಸೇರಿ ಚರ್ಚೆ‌ ನಡೆಸಿದ ಸಮಿತಿ, ಕೆಎಂಸಿ ಕಾನೂನು ಅಧ್ಯಯನ ಮಾಡಿತ್ತು. ನಂತರ ಆ್ಯಕ್ಟ್ ನಲ್ಲಿರುವ ಮಹತ್ವದ ಹದಿನಾಲ್ಕು ಅಂಶಗಳಲ್ಲಿ ಆರು ಅಂಶಗಳನ್ನು ಒಪ್ಪಿಕೊಂಡು, ಆ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು.‌ ಈ ವಿಷಯ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯೂ ಆಗಿತ್ತು.

ಆದರೆ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಂತರದ ದಿನಗಳಲ್ಲಿ ಈ ಕಡತ ಯಾವ ಬೆಳವಣಿಗೆ ಕಾಣದೇ ಧೂಳು ತಿನ್ನುತ್ತಾ ಬಂದಿದೆ. ಒಟ್ಟಿನಲ್ಲಿ ಇಂತಹದೊಂದು ಯೋಜನೆ ನಿಜಕ್ಕೂ ನೆನೆಗುದಿಗೆ ಬಿದ್ದಿದ್ದು, ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ನಿರ್ಧಾರವನ್ನು ಕೈಗೆತ್ತಿಕೊಳ್ಳಬೇಕಿದೆ.

Edited By : Somashekar
Kshetra Samachara

Kshetra Samachara

27/07/2022 03:48 pm

Cinque Terre

19.46 K

Cinque Terre

0

ಸಂಬಂಧಿತ ಸುದ್ದಿ