ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಾಸಕ ನಿಂಬಣ್ಣವರ ಕ್ಷೇತ್ರ ಬಿಜೆಪಿಯಲ್ಲಿ ಭಿನ್ನಮತ; ಪಟ್ಟಣ ಪಂಚಾಯತಿಯಲ್ಲಿ ಹೈ ಡ್ರಾಮಾ?

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಪಂಚಾಯತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಹಿನ್ನೆಲೆ ಅನಸೂಯ ಹೆಬ್ಬಳ್ಳಿಮಠ ವಿರುದ್ಧ ಅವಿಶ್ವಾಸ ಮಂಡನೆಯಾಗಲಿದೆ. ಸ್ವಪಕ್ಷೀಯರಿಂದಲೇ ಅವಿಶ್ವಾಸ ಮಂಡನೆಯಾಗಲಿದ್ದು, ಬಿಜೆಪಿಯಲ್ಲಿಯೇ ಎರಡು ಬಣಗಳ ನಡುವಿನ ಕಿತ್ತಾಟ ಭುಗಿಲೆದ್ದಿದೆ.

ಹೌದು‌... ಶಾಸಕರ ಬಣದ ವಿರುದ್ಧ ರೆಬಲ್ ಆಗಿರುವ ಅನಸೂಯಾ ಹೆಬ್ಬಳ್ಳಿಮಠ ಅವಿಶ್ವಾಸ ಮಂಡನೆಗೆಯೇ ಬಿಜೆಪಿ ಸದಸ್ಯರು ಮುಂದಾಗಿದ್ದಾರೆ. 17 ಸದಸ್ಯರ ಬಲದ ಕಲಘಟಗಿ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ 9, ಕಾಂಗ್ರೆಸ್‌ 3, ಜೆಡಿಎಸ್ 2, ಪಕ್ಷೇತರ ಮೂರು ಸದಸ್ಯರಿರುವ ಪಟ್ಟಣ ಪಂಚಾಯತಿಯಲ್ಲಿ ವಿಶ್ವಾಸ ಮತ ಯಾಚನೆ ವೇಳೆ ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ.

ತಮ್ಮ ಬಣದೊಂದಿಗೆ ಶಕ್ತಿ ಪ್ರದರ್ಶನಕ್ಕೆ ಶಾಸಕ ಸಿ.ಎಮ್. ನಿಂಬಣ್ಣವರ ಇಳಿದಿದ್ದು, ರೆಬಲ್ ಅಧ್ಯಕ್ಷೆಗೆ ಇನ್ನಿತರ ಪಕ್ಷಗಳ ಬೆಂಬಲದ ಸಾಧ್ಯತೆ ಹೆಚ್ಚಿದೆ. ವಿಶ್ವಾಸಮತ ಯಾಚನೆಗೆ ತಯಾರಿ ಮಾಡಿಕೊಂಡಿದ್ದು, ಧಾರವಾಡ ಎಸಿ ನೇತೃತ್ವದಲ್ಲಿ ಅವಿಶ್ವಾಸ ಮತ ಯಾಚನೆ ಪ್ರತಿಕ್ರಿಯೆ ನಡೆಯಲಿದೆ.

Edited By : Somashekar
Kshetra Samachara

Kshetra Samachara

25/07/2022 01:37 pm

Cinque Terre

38.47 K

Cinque Terre

1

ಸಂಬಂಧಿತ ಸುದ್ದಿ