ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ವಿ.ಪ ಚುನಾವಣೆ: ಏಳು ಅಭ್ಯರ್ಥಿಗಳ ನಾಮಪತ್ರ ಸಿಂಧು, ಇಬ್ಬರ ನಾಮಪತ್ರ ತಿರಸ್ಕೃತ

ಧಾರವಾಡ: ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಕಾರ್ಯ ಇಂದು ಬೆಳಗಾವಿಯಲ್ಲಿ ಜರುಗಿತು. ಏಳು ಅಭ್ಯರ್ಥಿಗಳ ನಾಮಪತ್ರಗಳ ಸಿಂಧುವಾಗಿವೆ. ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳು ಅಸಿಂಧುವಾಗಿವೆ.

ತುಳಸಪ್ಪ ಕೆ.ದಾಸರ್ ಅವರು ಈ ಹಿಂದಿನ‌ ಚುನಾವಣೆಗಳ ವೆಚ್ಚದ ವಿವರ ಸಲ್ಲಿಸದ ಕಾರಣ ಭಾರತ ಚುನಾವಣಾ ಆಯೋಗವು 2024 ರವರೆಗೆ ಚುನಾವಣೆಗೆ ಸ್ಪರ್ಧಿಸದಿರಲು ಅವರನ್ನು ಅನರ್ಹಗೊಳಿಸಿದೆ. ವಿನಾಯಕ ವಿ. ಕಾಚಟ್ಟಿಯವರ ಎಂಬ ಅಭ್ಯರ್ಥಿಯು 28 ವರ್ಷದವರಾಗಿದ್ದು, ಕನಿಷ್ಠ ವಯೋಮಿತಿ 30 ವರ್ಷ ತುಂಬಿರದ ಕಾರಣ ಅವರ ನಾಮಪತ್ರ ತಿರಸ್ಕಾರಗೊಂಡಿವೆ. ಉಳಿದ ಏಳು ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ.

ನಾಮಪತ್ರಗಳನ್ನು ಹಿಂಪಡೆಯಲು ಮೇ.30 ರವರೆಗೆ ಅವಕಾಶವಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳಾಗಿರುವ,ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

27/05/2022 09:33 pm

Cinque Terre

36.48 K

Cinque Terre

0

ಸಂಬಂಧಿತ ಸುದ್ದಿ