ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊರೊನಾ ವಾರಿಯಸ್೯ಗೆ ಖಾಯಂ ಹುದ್ದೆ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹ

ಧಾರವಾಡ: ಕೊರೊನಾ ವಾರಿಯಸ್೯ ಆಗಿ ಸೇವೆ ಸಲ್ಲಿಸಿದ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿದ ಸರ್ಕಾರದ ನಡೆ ಖಂಡಿಸಿ, ಆಮ್ ಆದ್ಮಿ ಪಾರ್ಟಿ ನೇತೃತ್ವದಲ್ಲಿ ಕೊರೊನಾ ವಾರಿಯಸ್೯ ಸಿಬ್ಬಂದಿಗಳು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.

ಎರಡು ವರ್ಷಗಳ ಹಿಂದೆ ಇಡೀ ಪ್ರಪಂಚವೇ ಕೊರೊನಾ ಹೆಮ್ಮಾರಿಗೆ ತುತ್ತಾಗಿ, ಎಲ್ಲರೂ ಭಯದಲ್ಲಿಯೇ ಜೀವನ ಮಾಡಿ, ಕೆಲಸವಿಲ್ಲದೆ, ವ್ಯವಹಾರ, ವ್ಯಾಪಾರ ಇಲ್ಲದೆ ಮನೆಯಲ್ಲಿ ಇರುವಂತಹ ಪರಿಸ್ಥಿತಿ ಉಂಟಾಗಿತ್ತು. ಇಂತಹ ಸಮಯದಲ್ಲಿ ಜೀವನದ ಹಂಗು ತೊರಿದು ಕೆಲಸ ಮಾಡಿದವರು ಕೊರೊನಾ ವಾರಿಯಸ್೯ ಸಿಬ್ಬಂದಿಗಳು, ಹೀಗಿರುವಾಗ ಸರ್ಕಾರ ಕೊರೊನಾ ವಾರಿಯಸ್೯ ಕೆಲಸದಿಂದ ತೆಗೆದುಹಾಕಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಸಂಘಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ರಾಜ್ಯದಲ್ಲಿ ಕೊರೊನಾ ವಾರಿಯಸ್೯ಗೆ ಗುತ್ತಿಗೆ ಆಧಾರದ ನೌಕರರನ್ನಾಗಿ ಖಾಯಂ ಹುದ್ದೆ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಯಾಕೆ ಖಾಯಂ ಹುದ್ದೆ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಕೊರೊನಾ ವಾರಿಯಸ್೯ಗೆ ನ್ಯಾಯ ಸಿಗದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

Edited By :
Kshetra Samachara

Kshetra Samachara

04/04/2022 02:08 pm

Cinque Terre

21.34 K

Cinque Terre

1

ಸಂಬಂಧಿತ ಸುದ್ದಿ