ಅಣ್ಣಿಗೇರಿ; 2022-23 ಸಾಲಿನ ಪುರಸಭೆಯ ಬಜೆಟ್ ಪೂರ್ವ ಸಭೆ ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಕಚೇರಿಯಲ್ಲಿ ಜರುಗಿತು.
ಇನ್ನೂ ನೂತನವಾಗಿ ಆಯ್ಕೆಗೊಂಡ ಪುರಸಭೆಯ ಎಲ್ಲ ಸದಸ್ಯರು ಭಾಗವಹಿಸಿ ಪಟ್ಟಣದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಇದೇ ವೇಳೆ ಪುರಸಭೆಯ ಮುಖ್ಯಾಧಿಕಾರಿ ಮಾತನಾಡಿ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಲಿಖಿತ ರೂಪದಲ್ಲಿ ಬರೆದು ಕೊಡುವ ಹಾಗೆ ನೂತನ ಸದಸ್ಯರಿಗೆ ಹಾಗೂ ಪಟ್ಟಣದ ಗಣ್ಯರಿಗೆ ವಿನಂತಿಸಿದರು.
Kshetra Samachara
19/02/2022 11:54 am