ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರವನ್ನು ಸ್ಮಾರ್ಟ್ ಮಾಡಲು ಬಂದ ಸ್ಮಾರ್ಟ್ ಸಿಟಿ ಯೋಜನೆ ಸದ್ಯಕ್ಕೆ ಪೂರ್ಣಗೊಳ್ಳುವ ಯಾವ ಲಕ್ಷಣ ಕೂಡ ಕಾಣುತ್ತಿಲ್ಲ. ಇಷ್ಟು ವರ್ಷಗಳಾದರೂ ಆಮೆಗತಿಯಲ್ಲಿ ಸಾಗಿರುವ ಕಾಮಗಾರಿಯಿಂದ ಸ್ಮಾರ್ಟ್ ಆಗುವ ಯಾವುದೇ ಮುನ್ಸೂಚನೆ ಕೂಡ ಕಾಣುತ್ತಿಲ್ಲ.
ಹೌದು..ಸ್ಮಾರ್ಟ್ ಸಿಟಿಯ ಯೋಜನೆಯ ಕಾಮಗಾರಿ ತೀರ ನಿಧಾನಗತಿಯಲ್ಲಿ ಸಾಗಿದ್ದು, ಜನರಿಗೆ ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ನಿರಾಶೆ ಭಾವನೆ ಉಂಟಾಗಿದೆ. ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಒದಗಿಸುವ ಸದುದ್ದೇಶದಿಂದ ಚಿಟಗುಪ್ಪಿ ಆಸ್ಪತ್ರೆಯನ್ನು ನವೀಕರಣ ಮಾಡಲು ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ವಿಪರ್ಯಾಸಕರ ಸಂಗತಿ ಎಂದರೆ ಕಾಮಗಾರಿ ಅವಧಿಯು ಮುಕ್ತಾಯಗೊಂಡರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಚಿಟಗುಪ್ಪಿ ಆಸ್ಪತ್ರೆ ನವೀಕರಣ ಯೋಜನೆಯನ್ನು 26.18 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ 29-05-2020 ರಿಂದ ಆರಂಭಗೊಂಡ ಕಾಮಗಾರಿ ಹನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಇದುವರೆಗೂ ಪೂರ್ಣಗೊಳ್ಳುವ ಲಕ್ಷಣಗಳೆ ಕಾಣುತ್ತಿಲ್ಲ.
ಒಟ್ಟಿನಲ್ಲಿ ಅಧಿಕಾರಿಗಳು ನಾಮಮಾತ್ರಕ್ಕೆ ರೂಪರೇಷೆಗಳನ್ನು ಸಿದ್ಧಪಡಿಸುತ್ತಾರೆ. ಅದೇ ರೀತಿ ಗುತ್ತಿಗೆದಾರರು ಕೂಡ ಅಧಿಕಾರಗಳಂತೆ ಕುಂಟು ನೆಪ ಹೇಳಿ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ. ಇನ್ನಾದರೂ ಕಾಮಗಾರಿ ಚುರುಕುಗೊಳಿಸಿ ನವೀಕರಣ ಕಾಮಗಾರಿ ಪೂರ್ಣಗೊಳಿಸಬೇಕಿದೆ.
Kshetra Samachara
15/12/2021 03:39 pm