ಹುಬ್ಬಳ್ಳಿ: ಕಳೆದ ಹಲವು ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ 104 ಆರೋಗ್ಯ ಸಹಾಯವಾಣಿ ಸಿಬ್ಬಂದಿ ಪ್ರತಿಭಟಿನೆ ಮಾಡುತ್ತಿದ್ದಾರೆ. ಈ ಮಧ್ಯೆ 104 ಆರೋಗ್ಯ ಸಹಾಯವಾಣಿಯ ಅಧಿಕಾರಿ ನಾಲಿಗೆ ಹರಿ ಬಿಟ್ಟಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಪ್ರತಿಭಟನೆ ವೇಳೆಯಲ್ಲಿ ಅಧಿಕಾರಿ ಅಹ್ಮದ್ ಯಾಕೂಬ್, 'ಮುಖ್ಯಮಂತ್ರಿಯೇ ಏನು ಕಿತ್ತುಕೊಂಡಿಲ್ಲ. ಇನ್ನು ನೀವೇನ್ ಮಾಡೋದಕ್ಕೆ ಆಗುತ್ತೆ' ಎಂದು ಹೇಳಿದ್ದಾರೆ.
ಆರೋಗ್ಯ ಸಹಾಯವಾಣಿ ಸಿಬ್ಬಂದಿಯು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸಿದ್ದಾರೆ. ಆದರೆ ಈವರೆಗೂ ಯಾರೊಬ್ಬರೂ ಇತ್ತ ಗಮನವನ್ನು ಹರಿಸಿಲ್ಲ ಎಂದು ಆರೋಗ್ಯ ಸಹಾಯವಾಣಿಯ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಸದ್ಯ ಹುಬ್ಬಳ್ಳಿಯ IT ಪಾರ್ಕ್ ನಲ್ಲಿರುವ ಆರೋಗ್ಯ ಸಹಾಯವಾಣಿ ಕೇಂದ್ರದ 200 ಸಿಬ್ಬಂದಿ ಕೆಲಸ ಬಿಟ್ಟು ಕಚೇರಿಯ ಹೊರಗಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಕೊರೊನಾ ವೇಳೆಯಲ್ಲಿ ಕೆಲಸ ಮಾಡಿದ ಇವರಿಗೆ ನ್ಯಾಯ ಯಾವಾಗ ಸಿಗುತ್ತೆ ಎಂದು ಕಾದು ನೋಡಬೇಕಿದೆ.
Kshetra Samachara
22/10/2021 10:52 am