ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಪಿಡಿಓಗಳ ಸಮಾವೇಶ

ಹುಬ್ಬಳ್ಳಿ: ಪಿಡಿಓಗಳ ಹುದ್ದೆ ಮೇಲ್ದರ್ಜೆ, ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಮುಂಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಗ್ರಾಮೀಣ ಪ್ರದೇಶಗಳ‌ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ವಹಿಸುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ರಾಜ್ಯ ಮಟ್ಟದ ಸಮಾವೇಶ ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆಯಿತು..

ಗ್ರಾಮೀಣ ಪ್ರದೇಶಗಳ ಅಭ್ಯುದಯ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸುವ ಪಿಡಿಓಗಳಿಗೆ, ರಾಜ್ಯ ಸರ್ಕಾರ ಮೇಲ್ದರ್ಜೆಗೇರಿಸಬೇಕು, ಅಲ್ಲದೆ, ಪಿಡಿಓಗಳ ಸಕಲ ಬೇಡಿಕೆಗಳನ್ನ ರಾಜ್ಯ ಸರ್ಕಾರ ಈಡೇರಿಸಬೇಕು ಎಂಬ ಆಗ್ರಹವನ್ನಿಟ್ಟುಕೊಂಡು, ಹುಬ್ಬಳ್ಳಿಯಲ್ಲಿಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ, ರಾಜ್ಯಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಇನ್ನು ಈ ಸಮಾವೇಶದ ಕೇಂದ್ರಬಿಂದುವಾಗಿ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ .ಈಶ್ವರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಪ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ ಸೇರಿದಂತೆ ಹಲವು ಗಣ್ಯರು ಹಾಗೂ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಈ ಸಮಾವೇಶಕ್ಕೆ ವಿದ್ಯುಕ್ತ ಚಾಲನೆ ನೀಡುವ ಮೂಲಕ, ಪಿಡಿಓಗಳ ಬೇಡಿಕೆ ಹಾಗೂ ಗ್ರಾಮ ಪಂಚಾಯಿತಿಗಳ ಅಭ್ಯುದಯದ ಕುರಿತು ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಚರ್ಚಿಸಿದರು.

ಈ ನಡುವೆ ರಾಜ್ಯದಲ್ಲಿ ಪಿಡಿಓಗಳ ಮೇಲೆ ಮಾನಸಿಕ ಹಾಗೂ ದೈಹಿಕ ಹಲ್ಲೆಗಳು ನಡೆಯುತ್ತಲೇ ಇವೆ. ಆದರೆ ನಿಮ್ಮ ರಕ್ಷಣೆಗೆ ಸರ್ಕಾರ ಮಹತ್ವ ನೀಡಲಿದೆ. ಈ ಬಗ್ಗೆ ನಾನು ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇನೆ ಎಂಬ ಭರವಸೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಭರವಸೆ ನೀಡಿದರು..

ಇನ್ನು ಗ್ರಾಮ ಪಂಚಾಯತ್ ಸಬಲೀಕರಣದಲ್ಲಿ ಪಿಡಿಓಗಳ ಪಾತ್ರ ಹಾಗೂ ಸವಾಲುಗಳ ಕುರಿತು, ರಾಜ್ಯದ ಬಹುತೇಕ ಜಿಲ್ಲೆಗಳ ಪಿಡಿಓಗಳ ಜೊತೆಗೆ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು ಚರ್ಚೆ ಮಾಡುವ ಮೂಲಕ, ತಮ್ಮ ಬೇಡಿಕೆಗಳನ್ನ ಸಚಿವ ಈಶ್ವರಪ್ಪ ಅವರಿಗೆ ವ್ಯಕ್ತಪಡಿಸುವ ಮೂಲಕ, ಸರ್ಕಾರದ ಗಮನ ಸೆಳೆಯಲು ಮನವಿ ಮಾಡಿದರು.

ಒಟ್ಟಾರೆ ಗ್ರಾಮೀಣ ಪ್ರದೇಶಗಳಲ್ಲಿ‌ ಸರ್ಕಾರದ ಮಹತ್ವದ ಯೋಜನೆಗಳ ಅನುಷ್ಠಾನ ಹಾಗೂ ಗ್ರಾಮಪಂಚಾಯಿತಿ ವ್ಯಾಪ್ತಿಗಳನ್ನ‌ಉ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಪಿಡಿಓಗಳ ಬೇಡಿಕೆಗೆ, ಸರ್ಕಾರ ಸರಿಯಾದ ರೀತಿಯಲ್ಲಿ‌ ಸ್ಪಂದನೆ ನೀಡಲಿ, ಹಿಂದುಳಿದ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ದಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶ್ರಮಿಸಲಿ‌ ಎನ್ನೊದು ನಮ್ಮ ಆಶಯ......!

Edited By : Manjunath H D
Kshetra Samachara

Kshetra Samachara

23/01/2021 07:11 pm

Cinque Terre

38.98 K

Cinque Terre

0

ಸಂಬಂಧಿತ ಸುದ್ದಿ