ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲೆಯಲ್ಲಿ ಶೇ.81.71 ರಷ್ಟು ಮತದಾನ

ಧಾರವಾಡ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆ ಡಿಸೆಂಬರ್ 22 ರಂದು ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕುಗಳ 65 ಗ್ರಾಮ ಪಂಚಾಯತಗಳಲ್ಲಿ ಜರುಗಿದ್ದು, ಈ ಗ್ರಾ.ಪಂ ವ್ಯಾಪ್ತಿಯಲ್ಲಿನ 2,81,274 ಮತದಾರರ ಪೈಕಿ ಒಟ್ಟು 2.33,833 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

ಈ ಭಾಗದಲ್ಲಿ ಶೇ.83.13 ರಷ್ಟು ಮತದಾನವಾಗಿದೆ ಮತ್ತು ಎರಡನೇ ಹಂತದ ಗ್ರಾಮ ಪಂಚಾಯತ ಚುನಾವಣೆ ಡಿಸೆಂಬರ್ 27 ರಂದು ಹುಬ್ಬಳ್ಳಿ, ಕುಂದಗೋಳ, ಅಣ್ಣಿಗೇರಿ ಮತ್ತು ನವಲಗುಂದ ತಾಲೂಕುಗಳ 71 ಗ್ರಾಮ ಪಂಚಾಯತಗಳಲ್ಲಿ ಜರುಗಿದ್ದು, ಈ ಗ್ರಾ.ಪಂ ವ್ಯಾಪ್ತಿಯಲ್ಲಿನ 3,13,800 ಮತದಾರರ ಪೈಕಿ ಒಟ್ಟು 2,52,455 ಮತದಾರರು ತಮ್ಮ ಮತ ಚಲಾಯಿಸಿದ್ದು ಶೇ.80.41 ರಷ್ಟು ಮತದಾನವಾಗಿದೆ.

ಒಟ್ಟಾರೆ ಜಿಲ್ಲೆಯ 136 ಗ್ರಾಮ ಪಂಚಾಯತಿಗಳ ಚುನಾವಣೆಯಲ್ಲಿ ಒಟ್ಟು 4,86,288 ಮತದಾರರು ಮತ ಚಲಾಯಿಸಿದ್ದು, ಅಂತಿಮವಾಗಿ ಒಟ್ಟು ಶೇ.81.71 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ತಾಲೂಕಿನಲ್ಲಿ ಒಟ್ಟು 34 ಗ್ರಾಮ ಪಂಚಾಯತಿಗಳಿಗೆ, 238 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ.

ಒಟ್ಟು ಮತ ಚಲಾಯಿಸಿದವರ ಸಂಖ್ಯೆ 1,33,715 (ಪುರುಷ-70,112, ಮಹಿಳೆ- 63,603) ಆಗಿದ್ದು, ಶೇ. 81.39 ರಷ್ಟು ಮತದಾನವಾಗಿದೆ.

ಅಳ್ನಾವರ ತಾಲೂಕಿನಲ್ಲಿ ಒಟ್ಟು 4 ಗ್ರಾಮ ಪಂಚಾಯತಿಗಳ 21 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 12,599 (ಪುರುಷ-6,576, ಮಹಿಳೆ- 6,023) ಆಗಿದ್ದು, ಶೇ. 84.18 ರಷ್ಟು ಮತದಾನವಾಗಿದೆ.

ಕಲಘಟಗಿ ತಾಲೂಕಿನಲ್ಲಿ ಒಟ್ಟು 27 ಗ್ರಾಮ ಪಂಚಾಯತಿಗಳ 153 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 87,519 (ಪುರುಷ-46,303, ಮಹಿಳೆ- 41,216) ಆಗಿದ್ದು, ಶೇ. 85.78 ರಷ್ಟು ಮತದಾನವಾಗಿದೆ.

ಎರಡನೆ ಹಂತದ ಗ್ರಾಮ ಪಂಚಾಯತ ಚುನಾವಣೆ ಡಿಸೆಂಬರ್ 27 ರಂದು ಹುಬ್ಬಳ್ಳಿ, ಕುಂದಗೋಳ, ನವಲಗುಂದ ಮತ್ತು ಅಣ್ಣಿಗೇರಿ ತಾಲೂಕುಗಳಲ್ಲಿ ಶಾಂತಯುವಾಗಿ ಚುನಾವಣೆ ಜರುಗಿತು, 71 ಗ್ರಾಮ ಪಂಚಾಯತಿಗಳ 455 ಮತಗಟ್ಟೆಗಳಲ್ಲಿ, ಒಟ್ಟು ಮತ ಚಲಾಯಿಸಿದವರ ಸಂಖ್ಯೆ 2,52,455 ಆಗಿದ್ದು, ಶೇ.80.41 ರಷ್ಟು ಮತದಾನವಾಗಿದೆ

ಹುಬ್ಬಳ್ಳಿ ತಾಲೂಕಿನಲ್ಲಿ ಒಟ್ಟು 26 ಗ್ರಾಮ ಪಂಚಾಯತಿಗಳ 159 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 90,653 (ಪುರುಷ- 47,209, ಮಹಿಳೆ- 43,444) ಆಗಿದ್ದು, ಶೇ. 81.53 ರಷ್ಟು ಮತದಾನವಾಗಿದೆ.

ಕುಂದಗೋಳ ತಾಲೂಕಿನಲ್ಲಿ ಒಟ್ಟು 23 ಗ್ರಾಮ ಪಂಚಾಯತಿಗಳ 157 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 85,749 (ಪುರುಷ- 45,161, ಮಹಿಳೆ- 40,588) ಆಗಿದ್ದು, ಶೇ. 80.45 ರಷ್ಟು ಮತದಾನವಾಗಿದೆ.

ನವಲಗುಂದ ತಾಲೂಕಿನಲ್ಲಿ ಒಟ್ಟು 14 ಗ್ರಾಮ ಪಂಚಾಯತಿಗಳ 90 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 48,828 (ಪುರುಷ- 25,967 ಮಹಿಳೆ- 22,861) ಆಗಿದ್ದು, ಶೇ. 77.80 ರಷ್ಟು ಮತದಾನವಾಗಿದೆ.

ಅಣ್ಣಿಗೇರಿ ತಾಲೂಕಿನಲ್ಲಿ ಒಟ್ಟು 08 ಗ್ರಾಮ ಪಂಚಾಯತಿಗಳ 49 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 27,225 (ಪುರುಷ- 14,250, ಮಹಿಳೆ- 12,975) ಆಗಿದ್ದು, ಶೇ. 81.86 ರಷ್ಟು ಮತದಾನವಾಗಿದೆ.

ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಓರ್ವ ಹಾಗೂ ಹುಬ್ಬಳ್ಳಿ ತಾಲೂಕಿನ ಶೆ ರೆವಾಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಓರ್ವ ಕೋವಿಡ್ ಸೋಂಕಿತ ಮತದಾರರು ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮತದಾನ ಮಾಡಿದ್ದಾರೆ.

ಎರಡನೇ ಹಂತದ ಚುನಾವಣೆಯಲ್ಲಿ ಬರುವ ಹುಬ್ಬಳ್ಳಿ ತಾಲೂಕಿನ ಕಟ್ನೂರ ಗ್ರಾಮ ಪಂಚಾಯಿತಿಯ ಮತಗಟ್ಟೆ ಸಂಖ್ಯೆ 108, 109 ಮತ್ತು ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮ ಪಂಚಾಯಿತಿಯ ಅಮರಗೋಳ ಗ್ರಾಮದ ಮತಗಟ್ಟೆ ಸಂಖ್ಯೆ 72, 73, 74 ಹಾಗೂ 74ಎ ರಲ್ಲಿ ಮತದಾನ ಜರುಗಿರುವುದಿಲ್ಲ.

ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯ ಎರಡೂ ಹಂತದ ಗ್ರಾಮ ಪಂಚಾಯತ ಚುನಾವಣೆಗಳಲ್ಲಿ ಗ್ರಾಮ ಪಂಚಾಯತಗಳ ವ್ಯಾಪ್ತಿಯ ಒಟ್ಟು 5,95,074 ಮತದಾರರ ಪೈಕಿ 4,86,288 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಶೇ.81.71 ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

28/12/2020 03:13 pm

Cinque Terre

41.54 K

Cinque Terre

0

ಸಂಬಂಧಿತ ಸುದ್ದಿ