ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದ ಹಿನ್ನಲೆಯಲ್ಲಿ ನೂತನ ಮೇಯರ್ ಮತ್ತು ಉಪಮೇಯರ್‌ಗೆ ಶುಭ ಕೋರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೂತನ ಮೇಯರ್ ಈರೇಶ್ ಅಂಚಟಗೇರಿ ಮತ್ತು ಉಪಮೇಯರ್ ಉಮಾ ಮುಕುಂದ ಅವರಿಗೆ ಜೋಶಿ ಕಿವಿಮಾತು ಹೇಳಿದ್ದಾರೆ.
ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮೂರು ವರ್ಷಗಳ ಬಳಿಕ ಪಾಲಿಕೆಗೆ ಈಗ ಆಡಳಿತ ಕಾರ್ಯಗಳು ಚುರುಕುಗೊಳಲಿದೆ.ನಮ್ಮ ಪಕ್ಷದ ಸದಸ್ಯರು ಅಧಿಕಾರ ಹಿಡಿದಿರುವುದು ಸಂತಸದ ವಿಷಯ ಎಂದರು. ಜನಪರ ಆಡಳಿತವನ್ನು ನೀಡಿ ಜನರ ಮನ್ನಣೆಗೆ ಮೇಯರ್ ಮತ್ತು ಉಪಮೇಯರ್ ಪಾತ್ರವಾಗಬೇಕು. ಅಲ್ಲದೇ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಅವಳಿನಗರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನೂತನ ಮೇಯರ್ ಈರೇಶ್ ಅಂಚಟಗೇರಿ ಮತ್ತು ಉಪಮೇಯರ್ ಉಮಾ ಮುಕುಂದ ಅವರಿಗೆ ಸಲಹೆ ನೀಡಿದರು.
Kshetra Samachara
28/05/2022 06:08 pm