ಎಸ್‌ಡಿಪಿಐ ಸಂಘಟನೆ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಬೆಳೆಸಿರುವ ಕೂಸು. ಎಸ್‌ಡಿಪಿಐಗೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್‌ಗಳ ಕುಮ್ಮಕ್ಕಿದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಸ್‌ಡಿಪಿಐ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಸಿಎಂ ಇದ್ದಾಗ ಎಸ್‌ಡಿಪಿಐ ಮೇಲಿನ ಕೇಸ್ ಗಳನ್ನು ವಜಾ ಮಾಡಿದರು. ಇನ್ನೂ ಸಿದ್ದರಾಮಯ್ಯ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮೂಲ ಕೇಳುತ್ತಾರೆ. ಆದರೆ ಅವರ ಮೂಲವನ್ನೇ ಜನ ಕಿತ್ತುಕೊಂಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಸಿದ್ದರಾಮಯ್ಯರಿಗೆ ಮೂಲ ನೆಲೆ ಇಲ್ಲ. ಕಾಂಗ್ರೆಸ್ ಮೂಲ ಇಟಲಿಯದು. ಕೇರಳ ಸರ್ಕಾರ ಎಸ್ ಡಿಪಿಐ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ದೇಶಕ್ಕೆ ಸಂದೇಶ ನೀಡಬೇಕು. ಬಾಲಕನ ಕೈಯಲ್ಲಿ ಘೋಷಣೆ ಕೂಗಿಸಿದವರ ಬಗ್ಗೆ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/05/2022 05:25 pm