ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಇಂದು ಮೊದಲ ಹಂತದಲ್ಲಿ ಧಾರವಾಡ, ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳ 65 ಗ್ರಾಮ ಪಂಚಾಯತಗಳಿಗೆ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ 122894 ಪುರುಷ 110536 ಮಹಿಳೆಯರು ಸೇರಿದಂತೆ ಒಟ್ಟು 233430 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದು, ಶೇ 82.99ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿನ 238 ಮತಗಟ್ಟಗಳಲ್ಲಿರುವ 1,64,282 ಮತದಾರರ ಪೈಕಿ 70,148 ಪುರುಷ, 63,564 ಮಹಿಳಾ ಸೇರಿ ಒಟ್ಟು 1,33,712 ಮತದಾರರು ಇಂದು ಮತ ಚಲಾಯಿಸಿದ್ದು, ಶೇಕಡಾವಾರು 81.39 ರಷ್ಟು ಮತದಾನವಾಗಿದೆ.
ಅಳ್ನಾವರ ತಾಲೂಕಿನ 4 ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿನ 21 ಮತಗಟ್ಟೆಗಳಲ್ಲಿರುವ 14,965 ಮತದಾರರ ಪೈಕಿ 6,576 ಪುರುಷ, 6,023 ಮಹಿಳಾ ಸೇರಿ ಒಟ್ಟು 12,599 ಮತದಾರರು ಇಂದು ಮತ ಚಲಾಯಿಸಿದ್ದು, ಶೇಕಡಾವಾರು 84.19 ರಷ್ಟು ಮತದಾನವಾಗಿದೆ.
ಕಲಘಟಗಿ ತಾಲೂಕಿನ 27 ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿನ 153 ಮತಗಟ್ಟೆಗಳಲ್ಲಿರುವ 1,02,027 ಮತದಾರರ ಪೈಕಿ 46,170 ಪುರುಷ, 40949 ಮಹಿಳಾ ಸೇರಿ ಒಟ್ಟು 87,119 ಮತದಾರರು ಇಂದು ಮತ ಚಲಾಯಿಸಿದ್ದು, ಶೇಕಡಾವಾರು 85.39 ರಷ್ಟು ಮತದಾನವಾಗಿದೆ.
ಒಟ್ಟು ಧಾರವಾಡ, ಕಲಘಟಗಿ ಮತ್ತು ಅಳ್ನಾವರ ತಾಲೂಕಿನ 65 ಗ್ರಾಮ ಪಂಚಾಯತಗಳ 412 ಮತೆಗಟ್ಟೆಗಳಲ್ಲಿ ಒಟ್ಟು 122894 ಪುರುಷ, ಒಟ್ಟು 1,10,536 ಮಹಿಳಾ ಮತದಾರರು ಸೇರಿ 2,33,430 ಮತದಾರಾರು ಮತದಾನ ಮಾಡಿದ್ದು, ಶೇಕಡಾವಾರು 82.99 ರಷ್ಟು ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
Kshetra Samachara
22/12/2020 09:24 pm