ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಹಸ್ತಾಂತರಿಸಿದ ಶಾಸಕ ಅಮೃತ

ಧಾರವಾಡ: ವಿವಿಧ ಕಾರಣಗಳಿಂದಾಗಿ ಸಾವಿಗೀಡಾದ ರೈತರ ಕುಟುಂಬಳಿಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರು ಪರಿಹಾರದ ಚೆಕ್ ಹಸ್ತಾಂತರಿಸಿದರು.

ಧಾರವಾಡದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಗಂಗಾ ಕಲ್ಯಾಣ ಯೋಜನೆಯ 19 ಜನ ಫಲಾನುಭವಿಗಳಿಗೆ ಮೋಟರ್ ಹಾಗೂ ಪಂಪ್‌ಸೆಟ್‌ಗಳು ವಿತರಣೆ ಮಾಡಿದರು.

ಅಲ್ಲದೇ ಚಕ್ಕಡಿಯಿಂದ ಬಿದ್ದು ಅಸುನೀಗಿದ ಜೀರಿಗವಾಡ ಗ್ರಾಮದ ಮಹಾದೇವಪ್ಪ ಹೊಂಗಲ, ಮುಗಳಿ ಗ್ರಾಮದ ಮುತ್ತಣ್ಣ ಖಂಡೋಬನವರ ಅವರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಮೊತ್ತವನ್ನು ಹಸ್ತಾಂತರಿಸಿದರು.

ಆತ್ಮಹತ್ಯೆ ಮಾಡಿಕೊಂಡ ಸೋಮಾಪುರ ಗ್ರಾಮದ ರೈತ ಭೀಮನಗೌಡ ಪಾಟೀಲ, ಕಲ್ಲೆ ಗ್ರಾಮದ ರಾಮಪ್ಪ ಬಾರಿಗಿಡದ, ಫಕ್ಕೀರಪ್ಪ ವಾಲೀಕಾರ, ಹೆಬ್ಬಳ್ಳಿ ಗ್ರಾಮದ ಶಿವಪ್ಪ ಶಿವಳ್ಳಿ ಅವರ ಕುಟುಂಬಸ್ಥರಿಗೆ ಶಾಸಕರು ತಲಾ 5 ಲಕ್ಷ ರೂಪಾಯಿಯ ಚೆಕ್‌ನ್ನು ಹಸ್ತಾಂತರಿಸಿದರು.

ತಹಶೀಲ್ದಾರ ಡಾ.ಸಂತೋಷಕುಮಾರ ಬಿರಾದಾರ, ನಾಗಪ್ಪ ಗಾಣಿಗೇರ, ಮಹೇಶ ಯಲಿಗಾರ, ರಾಜು ಜೀವಣ್ಣವರ, ಸಂಗನಗೌಡ ರಾಮನಗೌಡರ ಹಾಗೂ ಶಿವಪ್ಪ ಉಳವಣ್ಣವರ ಈ ಸಂದರ್ಭದಲ್ಲಿದ್ದರು.

Edited By : Nagaraj Tulugeri
Kshetra Samachara

Kshetra Samachara

25/01/2022 07:31 pm

Cinque Terre

35.11 K

Cinque Terre

0

ಸಂಬಂಧಿತ ಸುದ್ದಿ