ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೊರಟ್ಟಿ ವಿರುದ್ಧ ಬಹಿರಂಗ ಸವಾಲು ಹಾಕಿದ ಸ್ವಾಭಿಮಾನಿ ಶಿಕ್ಷಕರು: ಅವ್ಯವಹಾರದ ಗಂಭೀರ ಆರೋಪ

ಹುಬ್ಬಳ್ಳಿ: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ವಿರುದ್ಧ ಆರೋಪಗಳ ಸರಮಾಲೆಯೇ ಸುತ್ತಿಕೊಳ್ಳುತ್ತಿದೆ. ಹತ್ತೊಂಬತ್ತು ವರ್ಷಗಳ ಬಹುದೊಡ್ಡ ಭ್ರಷ್ಟಾಚಾರ ಮಾಡಿರುವ ಆರೋಪವೊಂದು ಗಂಭೀರವಾಗಿ ಕೇಳಿ ಬಂದಿದೆ.

ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹುಟ್ಟು ಹಾಕಿದ್ದೆ ಬಸವರಾಜ ಹೊರಟ್ಟಿ, ಹೀಗಾಗಿ ಅವರು ಯಾವ ನೈತಿಕತೆ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಾಭಿಮಾನಿ ಶಿಕ್ಷಕರ ಸಂಘದ ಸಂಚಾಲಕ ಎಂ.ಭರತ ಗಂಭೀರವಾಗಿ ಆರೋಪಿಸಿದರು. 1980 ರಲ್ಲಿ ಪ್ರಥಮ ಬಾರಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗಿ 1999 ರವರೆಗೆ ವಿಧಾನ ಪರಿಷತ್ ಸದಸ್ಯರಿಗೆ ಸಿಗುವ ಎಲ್ಲ ಸೌಲಭ್ಯ ಪಡೆಯುವುದರ ಜೊತೆಗೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಹೈಸ್ಕೂಲ್ ನ ದೈಹಿಕ ಶಿಕ್ಷಕರಾಗಿ ವೇತನ ಪಡೆದಿದ್ದಾರೆ. ಇದರಿಂದ ಒಬ್ಬ ನಿರುದ್ಯೋಗಿ ದೈಹಿಕ ಶಿಕ್ಷಣ ಹುದ್ದೆ ಕಳೆದುಕೊಂಡಿದ್ದಲ್ಲದೇ, ಎರಡು ಹುದ್ದೆಗಳಿಂದ ಸಂಬಳ ಪಡೆಯುವ ಮೂಲಕ ಸರ್ಕಾರಕ್ಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನೂ ಬಸವರಾಜ ಹೊರಟ್ಟಿ ಅವರ ಅಕ್ರಮಗಳನ್ನು ಪ್ರಶ್ನೆ ಮಾಡಿದವರಿಗೆ ಪದೋನ್ನತಿ, ಮುಂಬಡ್ತಿ ಹಾಗೂ ವೇತನ ತಡೆಯುವುದೇ ಇವರ ಸಾಧನೆಯಾಗಿದೆ‌.‌ ಶಿಕ್ಷಕರಿಗೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಶೂನ್ಯ. 42 ವರ್ಷಗಳ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರವನ್ನು ಹುಟ್ಟು ಹಾಕಿದ್ದೆ ಹೊರಟ್ಟಿ. ಇಂತವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕ ವೃಂದ ಪಾಠಕಲಿಸುವ ಮೂಲಕ ಶಿಕ್ಷಕರ ಶ್ರೇಯೋಭಿವೃದ್ದಿ ಶ್ರಮಿಸುವ ವ್ಯಕ್ತಿಗೆ ಬೆಂಬಲಿಸುವಂತೆ ಮನವಿ ಮಾಡಿದರು.

ಒಟ್ಟಿನಲ್ಲಿ ಬಸವರಾಜ ಹೊರಟ್ಟಿ ಅವರು 19 ವರ್ಷಗಳ ಕಾಲ ಎರಡು ಕಡೆಗೆ ಸಂಬಳ ಪಡೆದಿರುವ ಬಗ್ಗೆ ನಾವು ದಾಖಲಾತಿಗಳನ್ನು ಬಹಿರಂಗ ಪಡಿಸುತ್ತೇವೆ‌. ಹೊರಟ್ಟಿ ಅವರು ಇದು ಸುಳ್ಳು ಎಂದರೆ ತಾವು ಫಲಾನುಭವಿಗಳಾಗಿಲ್ಲ ಎಂಬುವ ದಾಖಲೆಗಳನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

Edited By : Manjunath H D
Kshetra Samachara

Kshetra Samachara

07/06/2022 03:44 pm

Cinque Terre

29.41 K

Cinque Terre

26

ಸಂಬಂಧಿತ ಸುದ್ದಿ