ಹುಬ್ಬಳ್ಳಿ: ಬಸವಣ್ಣನವರ ಬಗ್ಗೆ ಪಠ್ಯಪುಸ್ತಕ ವಿವಾದ ವಿಚಾರವಾಗಿ ನಾಡಿನ ಮಠಾಧೀಶರು ಸರ್ಕಾರಕ್ಕೆ ಪತ್ರ ಬರೆಯುತ್ತಾರೆಂದರೆ ಅದನ್ನ ಗಂಭೀರವಾಗಿ ಪರಿಗಣಿಸಬೇಕು. ಪಠ್ಯದಲ್ಲಿ ಏನು ಲೋಪದೋಷವಾಗಿದೆ ಅದನ್ನು ಸರಿಪಡಿಸಬೇಕು. ಇಲ್ಲವಾಗಿದರೆ ಅದನ್ನ ತಿಳಿಸಿ. ಸುಮ್ಮನೆ ವಿವಾದ ಮಾಡೋದು ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ವಿಷಯ ಗೊತ್ತಿಲ್ಲದೆ ಮಾತನಾಡುತ್ತಾರೆ. ನಾನು ಕೂಡ ಬಸವಣ್ಣನವರ ಕುರಿತು ಪಠ್ಯದಲ್ಲಿ ಏನಾಗಿದೆ ಅನ್ನೋದನ್ನು ನೋಡಿಲ್ಲ. ಈಗ ಆ ಪ್ರತಿ ತರಿಸೋಕೆ ಹೇಳಿದ್ದೇನೆ. ಅದರಲ್ಲಿ ತಪ್ಪಾಗಿದ್ದರೆ ಖಂಡಿತ ಅದನ್ನು ಸರಿಪಡಿಸಬೇಕು. ಈ ಬಗ್ಗೆ ನಾನೂ ಕೂಡ ಸಿಎಂಗೆ ಹೇಳುತ್ತೇನೆ. ಮಠಾಧೀಶರ ಪತ್ರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಂತರ ಸಚಿವ ಸಂಪುಟ ವಿಸ್ತರಣೆ ಕಾಲಾನುಕ್ರಮೇಣ ಆಗಬೇಕು. ಅದು ಸಿಎಂ ಹಾಗೂ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಯಾಕೆ ತಡವಾಗುತ್ತಿದೆ ನನಗೆ ಗೊತ್ತಿಲ್ಲ. ಸಿಎಂ ಅವರೇ ಹೇಳಬೇಕು ಎಂದರು.
Kshetra Samachara
01/06/2022 05:26 pm