ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಸವರಾಜ ಹೊರಟ್ಟಿಗೆ ಇಂಪಲ್ಸ್ ಪಿಯು ಸೈನ್ಸ್ ಕಾಲೇಜ್ ಬೆಂಬಲ...!

ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಿಂದು ಸುಮಾರು ಏಂಟು ಬಾರಿ ಆಯ್ಕೆಯಾಗಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಈ ಬಾರಿ ಚುನಾವಣೆಗೆ ಹುಬ್ಬಳ್ಳಿಯ ಇಂಪಲ್ಸ್ ಪಿಯು ಸೈನ್ಸ್ ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಸಹೃದಯತೆಯಿಂದ ಬೆಂಬಲ ಸೂಚಿಸುತ್ತೇವೆ ಎಂದು ಇಂಪಲ್ಸ್ ಪಿಯು ಸೈನ್ಸ್ ಕಾಲೇಜಿನ ಡೈರೆಕ್ಟರ್ ನುಜಾಹತ್ ಪಾತೀಮ್ ಹೇಳಿದರು.

ಈ ಕುರಿತು ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ಈಗಾಗಲೇ ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ರೀತಿಯಲ್ಲಿ ಸೇವೆ ಮಾಡುವ ಮೂಲಕ ಹೆಸರು ಮಾಡಿರುವ ಬಸವರಾಜ ಹೊರಟ್ಟಿಯವರು ಈಗ ಮತ್ತೊಮ್ಮೆ ಪಶ್ಚಿಮ ಪದವೀಧರರ ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸುತ್ತಿರುವುದು ನಿಜಕ್ಕೂ ಖುಷಿಯ ಸಂಗತಿಯಾಗಿದೆ ಎಂದರು.

ನಾವು ತುಂಬಾ ಹತ್ತಿರದಿಂದಲೇ ನೋಡಿರುವ ಹಾಗೇ ಸೃಜನಶೀಲ ವ್ಯಕ್ತಿತ್ವ. ಯಾರೇ ಸಮಸ್ಯೆ ಅಂದರೂ ಕೂಡ ಅವರಿಗೆ ಕ್ಷಣಾರ್ಧದಲ್ಲಿಯೇ ಸಲಹೆ ನೀಡಿ ಸಮಸ್ಯೆ ಬಗೆಹರಿಸುವ ವ್ಯಕ್ತಿತ್ವ ಹೊಂದಿರುವ ಬಸವರಾಜ ಹೊರಟ್ಟಿಯವರಿಗೆ ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತದೆ ಎಂದು ಅವರು ಹೇಳಿದರು.

Edited By :
Kshetra Samachara

Kshetra Samachara

18/05/2022 06:25 pm

Cinque Terre

46.76 K

Cinque Terre

10

ಸಂಬಂಧಿತ ಸುದ್ದಿ