ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಿದ್ಯುತ್ ಸಂಪರ್ಕ ಕಡಿತಗೊಂಡ ಹಾಸ್ಟೆಲ್‌ಗೆ ರಮೇಶ್ ಕೊಪ್ಪದ ಭೇಟಿ

ಕುಂದಗೋಳ : ಕಳೆದ ಒಂದು ವಾರದಿಂದ ವಿದ್ಯುತ್ ಸಂಪರ್ಕ ಇಲ್ಲದೆ ಪರದಾಡುತ್ತಾ ಅದೇ ಪರಿಸ್ಥಿತಿಯಲ್ಲಿ ಪದವಿ ಪಿಯುಸಿ ಪರೀಕ್ಷೆ ಎದುರಿಸಿದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಭೇಟಿ ನೀಡಿ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

ಕಳೆದು ಒಂದು ವಾರದಿಂದ ವಿದ್ಯುತ್ ಸಂಪರ್ಕ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಸ್ಥಗಿತಗೊಂಡಿದೆ. ಈ ವಿಷಯ ತಿಳಿದು ವಸತಿ ನಿಲಯಕ್ಕೆ ಭೇಟಿ ಕೊಟ್ಟ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ, ಮೇಣದ ಬತ್ತಿ ಬೆಳಗಿಸಿ ಹಾಸ್ಟೆಲ್ ಬೆಳಕು ಮಾಡಿ ಮಕ್ಕಳಿಗೆ ಪರೀಕ್ಷೆಗೆ ಕೊಡುಗೆಯಾಗಿ ಪೆನ್ ನೀಡಿದರು.

ಬಳಿಕ ಹಾಸ್ಟೆಲ್ ವಾರ್ಡನ್‌ಗೆ ಕರೆ ಮಾಡಿ ಮಾತನಾಡಿದ ಅವರು, ವಿದ್ಯುತ್ ಸಂಪರ್ಕ ಹಾಸ್ಟೆಲ್‌ಗೆ ಕಲ್ಪಿಸುವಂತೆ ಮನವಿ ಮಾಡಿ ಮಕ್ಕಳಿಗೆ ಮೂಲ ಸೌಕರ್ಯಗಳ ಸಮಸ್ಯೆ ಇದ್ದಲ್ಲಿ ತಮಗೆ ತಿಳಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕುಂದಗೋಳ ಪಟ್ಟಣದ ನಾಗರಿಕರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

06/04/2022 03:19 pm

Cinque Terre

44.38 K

Cinque Terre

0

ಸಂಬಂಧಿತ ಸುದ್ದಿ