ಕಲಘಟಗಿ: ಶಿಕ್ಷಕರು ಕಾಳಜಿ ವಹಿಸಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದರೆ ಸರ್ಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಶಾಸಕ ಸಿ. ಎಂ ನಿಂಬಣ್ಣವರ ಹೇಳಿದರು.
ತಾಲ್ಲೂಕಿನ ವಿವಿಧ ಗ್ರಾಮಗಳ ಶಾಲೆಗಳ ಕೊಠಡಿ ಉದ್ಘಾಟನೆ ಹಾಗೂ ಪ್ರತಿ ಮನೆ ಮನೆಗೆ ನಲ್ಲಿಯ ಮೂಲಕ ಮಲಪ್ರಭಾ ನದಿ ನೀರು ಪೂರೈಸುವ ಜಲ ಜೀವನ ಮಿಷನ್ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನನ್ನ ಮತಕ್ಷೇತ್ರದಲ್ಲಿ ಈಗಾಗಲೇ 114 ಶಾಲೆಗಳ ಕೊಠಡಿ ನಿರ್ಮಾಣ ಮಾಡಲಾಗಿದ್ದು ಸರ್ಕಾರ ಎಲ್ಲ ರೀತಿಯ ಮೂಲಭೂತ ಸೌಕರ್ಯ ನೀಡುತ್ತಿದೆ ಶಿಕ್ಷಕರು ಕೂಡಾ ನಮ್ಮೂರ, ನಮ್ಮ ಶಾಲೆ, ನಮ್ಮ ಮಕ್ಕಳು ಎಂದು ನಿಗಾವಹಿಸಿ ಶಿಕ್ಷಣ ನೀಡಿದರೆ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಬೆಳೆದು ಗೌರವಿತವಾಗಿ ಬದುಕುತ್ತಾರೆ ಎಂದು ತಿಳಿಸಿದರು. ಕೆಲವೊಂದು ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಎಂದು ಮನವಿ ಸಲ್ಲಿಸಿದರು ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದರು.
ಬೇಗೂರ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿ ಉದ್ಘಾಟನೆ, ದುಮ್ಮವಾಡ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿ ಉದ್ಘಾಟನೆ, ದೇವಲಿಂಗಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ, ಕಳಸನಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ, ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ ಹಾಗೂ ಪ್ರಾಥಮಿಕ ಶಾಲೆ, ಅಂಗನವಾಡಿ ಕೊಠಡಿ ಉದ್ಘಾಟಿಸಿದರು.
ಜೆ.ಜೆ.ಎಂ ಕಾಮಗಾರಿ ಗುತ್ತಿಗೆ ಪಡೆದ ಎಲ್ಲ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು. ತಾಲ್ಲೂಕ ಪಂಚಾಯತಿ ಇಓ ಶಿವಪುತ್ರಪ್ಪ ಮಠಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಎಂ, ಲೋಕೋಪಯೋಗಿ ಇಲಾಖೆ ಅಧಿಕಾರಿ ಚಂದ್ರಶೇಖರ ಚಿಕ್ಕಮಠ, ಪ್ರಕಾಶ ಹಸರಡ್ಡಿ, ಮಾತೇಶ ಹೆಬ್ಳಿ, ಜಯಪಾಲ ಬೇಟದೂರ,ಪರಶುರಾಮ ರಜಪೂತ ಇದ್ದರು.
Kshetra Samachara
12/01/2022 05:36 pm