ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರ ವಿಶೇಷ ಸಂದರ್ಶನ ನಡೆಸಿದ ಪಬ್ಲಿಕ್ ನೆಕ್ಸ್ಟ್

ವಿಶೇಷ ಸಂದರ್ಶನ: ಪ್ರವೀಣ ಓಂಕಾರಿ

ಧಾರವಾಡ: ಅನೇಕ ರಾಜಕೀಯ ತಿಕ್ಕಾಟಗಳ ಮಧ್ಯೆ ಅನಾತವಾಗಿದ್ದ ಕರ್ನಾಟಕ ಬಾಲವಿಕಾಸ ಅಕಾಡೆಮಿಗೆ ಕೊನೆಗೂ ಸಾರಥಿ ಸಿಕ್ಕಂತಾಗಿದೆ. ಬಿಜೆಪಿ ಸರ್ಕಾರ ಮೊನ್ನೆಯಷ್ಟೆ ಈರಣ್ಣ ಜಡಿ ಅವರಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸ್ಥಾನದ ಚುಕ್ಕಾಣಿ ನೀಡಿದೆ. ರಾಜಕೀಯ ವ್ಯಕ್ತಿಯ ಕೈಯಲ್ಲಿ ಸರ್ಕಾರ ಅಕಾಡೆಮಿಯ ಅಧಿಕಾರ ನೀಡಿದೆ. ಮಕ್ಕಳ ಸಾಹಿತ್ಯದ ಬಗ್ಗೆ ಅವರಿಗೇನು ಗೊತ್ತು? ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಮಕ್ಕಳಿಗಾಗಿ ಅವರೇನು ಮಾಡುತ್ತಾರೆ? ಅಕಾಡೆಮಿ ಬಗ್ಗೆ ಅವರಿಗೇನು ಗೊತ್ತು ಎಂಬ ನೂರಾರು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಆದರೆ, ಈರಣ್ಣ ಜಡಿ ಬಿಜೆಪಿ ಮುಖಂಡರಾಗಿದ್ದರೂ ಅಕಾಡೆಮಿಗೆ ಹಾಗೂ ಮಕ್ಕಳಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶ ಹೊಂದಿದ್ದಾರೆ.

ಮಕ್ಕಳಿಗಾಗಿ ವಿಶೇಷ ಕಾರ್ಟೂನ್ ಮ್ಯಾಕ್ಸಿನ್, ಮೊಬೈಲ್ ಆ್ಯಪ್ ಸೇರಿದಂತೆ ಅಕಾಡೆಮಿಗೆ ಹೆಚ್ಚಿನ ಅನುದಾನ ತರುವ ಉದ್ದೇಶ ಹೊಂದಿದ್ದಾರೆ. ಪಬ್ಲಿಕ್ ನೆಕ್ಸ್ಟ್ ಮೂಲಕ ಅವರು ಏನು ಹೇಳಿದ್ದಾರೆ ಅನ್ನೋದನ್ನು ನೀವೇ ಕೇಳಿ.

ಅಕಾಡೆಮಿಯ ಹಳೆಯ ಅಧ್ಯಕ್ಷರು ಹಾಗೂ ಮಕ್ಕಳ ಸಾಹಿತಿಗಳನ್ನು ಗಣನೆಗೆ ತೆಗೆದುಕೊಂಡು ಸಾಕಷ್ಟು ಕೆಲಸ ಮಾಡುವ ಉದ್ದೇಶ ಹೊಂದಿರುವ ಇವರಿಗೆ ಯಶಸ್ಸು ಸಿಗಲಿ, ಇವರ ನೇತೃತ್ವದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸಾಕಷ್ಟು ಕೆಲಸ ಮಾಡಲಿ ಎಂಬುದೇ ನಮ್ಮ ಉದ್ದೇಶ.

Edited By : Nagesh Gaonkar
Kshetra Samachara

Kshetra Samachara

19/09/2020 09:01 pm

Cinque Terre

90.75 K

Cinque Terre

2

ಸಂಬಂಧಿತ ಸುದ್ದಿ