ಹುಬ್ಬಳ್ಳಿ: ಸುದೀರ್ಘ ಹೋರಾಟದ ನಂತರ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸಂಜೆಯ ಮಹಾ ಮಂಗಳಾರತಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭಾಗಿಯಾಗುವ ಮೂಲಕ ಸೌಹಾರ್ದತೆ ಗಣೇಶೋತ್ಸವ ಆಚರಣೆ ಕರೆ ನೀಡಿದರು.
ಬೆಳಿಗ್ಗೆ ಕೂಡ ಪೂಜೆ ಸಲ್ಲಿಸಿದ್ದ ಕೇಂದ್ರ ಸಚಿವ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಂಜೆ ವೇಳೆ ಕೂಡ ಆಗಮಿಸಿ ಮಹಾ ಮಂಗಳಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇನ್ನೂ ಬೆಳಿಗ್ಗೆಯಿಂದಲೇ ಸಾರ್ವಜನಿಕರು ಗಣಪತಿ ದರ್ಶನಕ್ಕೆ ಆಗಮಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮಕ್ಕೆ ಮೆರಗನ್ನು ತಂದಿದ್ದಾರೆ.
Kshetra Samachara
31/08/2022 10:09 pm