ಹುಬ್ಬಳ್ಳಿ: ಜೀವನದ ಸಾರವನ್ನು ತಿಳಿದುಕೊಳ್ಳಬೇಕೆಂದರೆ ಭಗವದ್ಗೀತೆ ಓದಬೇಕು. ಜೀವನದಲ್ಲಿ ಸಮಸ್ಯೆ ಬಂದರೆ ಭಗವದ್ಗೀತೆ ಒಂದು ಪುಟ ತೆಗೆದು ನೋಡಿ. ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ. ನನಗೂ ಇದರ ಅನುಭವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯ ಭಗವದ್ಗೀತೆ ಜ್ಞಾನಲೋಕಾರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಜಗತ್ತಿನ ಶ್ರೇಷ್ಠ ಧರ್ಮಗ್ರಂಥ. ಈಶ್ವರಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಕಾರ್ಯ ಅದ್ಭುತ ಎಂದರು.
ಭಗವದ್ಗೀತೆ ಎಲ್ಲರಿಗೂ ಗೊತ್ತಗಾಲಿ ಎನ್ನುವುದಕ್ಕೆ, ಈ ಜ್ಞಾನಲೋಕ ಮ್ಯುಸಿಯಂ ನಿರ್ಮಿಸಿದ್ದಾರೆ. ಧರ್ಮ ಶ್ರೇಷ್ಠವಾದ ಭಾರತ ನಮ್ಮದಾಗಬೇಕು. ಅದುವೇ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಅಸತ್ಯ ಸತ್ಯದ ಮೇಲೆ ಆಡಳಿತ ಮಾಡ್ತಿದೆ. ಅನ್ಯಾಯ ನ್ಯಾಯದ ಮೇಲೆ ಪರಾಕ್ರಮ ಮಾಡ್ತಿದೆ. ಮೌಲ್ಯಯುತ ಸಮಾಜ ನಿರ್ಮಾಣ ಮಾಡೋಕೆ ಸಂಕಲ್ಪ ಮಾಡೋಣ ಎಂದು ಹುಬ್ಬಳ್ಳಿಯ ಭಗವದ್ಗೀತೆ ಜ್ಞಾನಲೋಕ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/05/2022 10:51 pm