ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿರುವ ದಿ.ಎಸ್.ಆರ್.ಬೊಮ್ಮಾಯಿಯವರ ಪ್ರತಿಮಗೆ ಸಿಎಂ ಬಸವರಾಜ ಬೊಮ್ಮಾಯಿವರ ಪುತ್ರ ಭರತ ಬಸವರಾಜ ಬೊಮ್ಮಾಯಿಯವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾನು ಉದ್ಯಮಿಯಾಗಿದ್ದೆನೆ. ತಂದೆಯವರಿಗೆ ಎಲ್ಲಾ ರಾಜಕೀಯ ಮತ್ತು ಅಡಳಿತ ಗೊತ್ತಿದೆ. ಅವರೆಲ್ಲಾ ಮ್ಯಾನೇಜ್ ಮಾಡುತ್ತಾರೆ. ನಾನು ತಂದೆರಯರು ಸಿಎಂ ಅದ ಬಳಿಕ ಮೊದಲ ಭಾರಿಗೆ ಹುಬ್ಬಳ್ಳಿಗೆ ಬಂದಿದ್ದೆ.
ಹೀಗಾಗೇ ಅಜ್ಜನವರ ಆಶಿರ್ವಾದ ಪಡೆಯಲು ಬಂದಿದ್ದೆನೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಪುತ್ರ ಭರತ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಇನ್ನೂ ಸಿಎಂ ಪುತ್ರ ಭರತ ಬೊಮ್ಮಾಯಿ ಹಾಗೂ ಪ್ರಜ್ವಲ ಉಡುಪಿಯವರು ಆವರಣದಲ್ಲಿ ಸಸಿ ನೆಡುವ ಮೂಲಕ ದಿ.ಎಸ್.ಆರ್.ಬೊಮ್ಮಾಯಿಯವರಿಗೆ ಗೌರವ ಸೂಚಿಸಿದರು. ಇದೇ ವೇಳೆ ಸಿಎಂ ಆಪ್ತ ಸ್ನೇಹಿತ ಮಂಜುನಾಥ ಉಡುಪಿಯವರು ಕೂಡ ಉಪಸ್ಥಿತರಿದ್ದರು.
Kshetra Samachara
04/08/2021 06:27 pm