ಹುಬ್ಬಳ್ಳಿ:ಶಹೀದ್ ದಿವಸ್' ಅಂಗವಾಗಿ ರಾಷ್ಟ್ರ ಧ್ವಜ ತಯಾರಕರನ್ನು ಅವಧೂತ್ ವಿನಯ ಗುರೂಜಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿಂದು ಬೆಂಗೇರಿ ಖಾದಿ ಗ್ರಾಮೋದ್ಯೋಗದಲ್ಲಿ ಸನ್ಮಾನಿಸಿ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್ ನಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು,ದೇಶದ ಏಕೈಕ ರಾಷ್ಟ್ರ ಧ್ವಜ ಉತ್ಪಾದಿಸುವ ಖಾದಿ ಕೇಂದ್ರ ಈಗ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಧ್ವಜ ಉತ್ಪಾದನೆಯ ಕಾರ್ಮಿಕರಿಗೆ ಎರಡು ತಿಂಗಳ ಆಹಾರದ ಕಿಟ್ ವಿತರಣೆ ಮಾಡಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ವಿನಯ ಗುರೂಜಿ, ಖಾದಿ ಉಳಿವಿಗೆ ಸರ್ಕಾರ ಜೊತೆ ಮಾತುಕತೆ ನಡೆಸಲಿದ್ದೇನೆ.ಖಾದಿ ಉಳಿವಿಗೆ ಸರ್ಕಾರ ಸೂಕ್ತ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಷ್ಟ್ರಧ್ವಜ ತಯಾರಕರ ಬದುಕು ಕೂಡ ಹಸನಾಗಿಸಬೇಕಿದೆ ಎಂದರು.
ಕೈಮಗ್ಗ ಉಳಿಯಬೇಕು, ನೇಕಾರರಿಗೆ ಕನಿಷ್ಠ ವೇತನ ನಿಗದಿಯಾಗಬೇಕಿದೆ.ರಾಷ್ಟ್ರೀಯ ಧ್ವಜ ತಯಾರಕರು ಎಂಬುವಂತ ಹೆಗ್ಗಳಿಕೆಯ ಹೆಸರಲ್ಲಿ ಸಂಕಷ್ಟ ಎದುರಿಸುತ್ತ ಜೀವನ ನಡೆಸುತ್ತಿದ್ದಾರೆ.ಸರ್ಕಾರ ಇವರ ಬಗ್ಗೆ ಕಣ್ಣು ತೆರೆದು ನೋಡಬೇಕಿದೆ ಎಂದು ಅವರು ಹೇಳಿದರು.
Kshetra Samachara
30/01/2021 04:48 pm