ನವಲಗುಂದ : ನವಲಗುಂದ ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ನಡೆದ ಭಾರತಿಯ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ನವಲಗುಂದ ನಗರದ ಹಿರಿಯರಾದ ಬಾಬಣ್ಣ ಹುರಕಡ್ಲಿ ಮತ್ತು ಪರಶುರಾಮ ಗುಳೆದ ಅವರು ಭಾರತಿಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಇನ್ನು ಇದೆ ವೇಳೆ ಧಾರವಾಡ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ, ತಾಲೂಕ ಅಧ್ಯಕ್ಷರಾದ ಶರಣಪ್ಪಗೌಡ ದಾನಪ್ಪಗೌಡ್ರ, ರೈತ ಮೋರ್ಚಾ ಜಿಲ್ಲಾ ಮಾಜಿ ಅಧ್ಯಕ್ಷರಾದ ಬಸವರಾಜ ಬೆಳವಣಿಕಿ, ಪುರಸಭೆ ನಾಮನಿರ್ದೇಶನ ಸದಸ್ಯರಾದ I D ಪ್ರಭುಗೌಡ್ರ, M.B ತೋಟಿ, ಗೀತಾ ಸಿ ಜನ್ನರ, ಬಸವರಾಜ ಕಾತರಕಿ ಅವರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷರಾದ ಅಣ್ಣಪ್ಪ ಬಾಗಿ, ಪಕ್ಷದ ಹಿರಿಯರಾದ ಶ್ರೀ ನಿಂಗಪ್ಪ ಚವಡಿ, ಶ್ರೀ ಸಿದ್ದಲಿಂಗಯ್ಯ ಹಿರೇಮಠ, ರಾಯನಗೌಡ ಪಾಟೀಲ, ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಪೂರ್ಣಿಮ ಜೋಷಿ, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಸವರಾಜ ಕಟ್ಟಿಮನಿ, ವಿಠಲ ರಾಯಬಾಗಿ ಹಾಗೂ ನಗರದ ಪುರಸಭೆ ಸರ್ವ ಸದಸ್ಯರು, ಮತ್ತು ನಾಮನಿರ್ದೇಶಿತ ಪುರಸಭೆ ಸದಸ್ಯರು ಹಾಗೂ ನಗರದ ಹಿರಿಯರು ಸಮಸ್ತ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
28/01/2022 06:44 pm