ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 19ರ ಕಲ್ಯಾಣ ನಗರದಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ 'ಮನ್ ಕೀ ಬಾತ್' ಕಾರ್ಯಕ್ರಮಕ್ಕೆ ಶಾಸಕ ಅರವಿಂದ ಬೆಲ್ಲದ ಅವರು ಭಾರತಾಂಬೆಗೆ ಪುಷ್ಪ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ 19 ನೇ ವಾರ್ಡಿನ ಪಾಲಿಕೆ ಸದಸ್ಯೆ ಜ್ಯೋತಿ ಪಾಟೀಲ, ಕಿರಣ್ ಶಿಂಧೆ, ಆರ್.ಎಮ್ ಷಡಕ್ಷರಿ, ಮುಖಂಡರಾದ ರಾಮಚಂದ್ರ ಪೋದಡ್ಡಿ, ಎಮ್.ಎಸ್ ಪಾಟೀಲ್, ನಾರಾಯಣ ಭಜಂತ್ರಿ, ನಾರಾಯಣ ನಾರಕ್ಕನವರ್, ವಾರ್ಡಿನ ಸಂಚಾಲಕರು, ಸಹ ಸಂಚಾಲಕರು, ಶಕ್ತಿ ಕೇಂದ್ರದ ಪ್ರಮುಖರು ಸೇರಿದಂತೆ ಇನ್ನಿತರ ಸ್ಥಳೀಯ ಮಹಿಳೆಯರು ನಾಗರಿಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
28/08/2022 05:15 pm