ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗೇಟ್ ಬಳಿ ನಿಂತಿದ್ದಕ್ಕೆ ವಾಗ್ವಾದ: ನನ್ನನ್ನೇ ಹೋಗು ಅಂತಿಯಾ? ಎಂದು ಪಿಎಸ್‌ಐ ಮೇಲೆ ಶಾಸಕ ಅಬ್ಬಯ್ಯ ಗರಂ

ಹುಬ್ಬಳ್ಳಿ: ಮೊನ್ನೆ ಶನಿವಾರ ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮುಂದೆ ಕೋಮು ಗಲಭೆ ನಡೆದ ಹಿನ್ನೆಲೆಯಲ್ಲಿ, ಪೊಲೀಸ್ ಠಾಣೆಯ ಮುಂದೆ ಹೆಚ್ಚಿನ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಅದೇ ರೀತಿ ಕೋಮು ಗಲಭೆ ಮಾಡಿದವರನ್ನು ಪೊಲೀಸರು ಬಂಧಿಸಿದ್ದಾರೆ. ಗಲಾಟೆ ನಡೆದ ಸ್ಥಳಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಭೇಟಿ ನೀಡಿದ್ದಾರೆ. ಒಳಗೆ ಬಿಡುವ ವಿಚಾರಕ್ಕೆ ಪಿಎಸ್‌ಐ ಮತ್ತು ಶಾಸಕ ಪ್ರಸಾದ ಅಬ್ಬಯ್ಯ ಅವರ ನಡುವೆ ವಾಗ್ವಾದ ನಡೆದಿದೆ.

ಠಾಣೆಯ ಒಳಗೆ ಮತ್ತು ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾಗಿದೆ. ಗೇಟ್ ಒಳಗೆ ನಿಲ್ಲಬೇಡಿ ಹೊರಗೆ ಹೋಗಿ ಸರ್ ಎಂದು ಪಿಎಸ್‌ಐ ಒಬ್ಬರು ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಹೇಳಿದ್ದಾರೆ. ಅದಕ್ಕೆ ತಾಳ್ಮೆ ಕಳೆದುಕೊಂಡ ಪ್ರಸಾದ್ ಅಬ್ಬಯ್ಯ 'ನಾನು ಇಲ್ಲಿನ ಶಾಸಕ. ನನಗೆ ಹೊರಗೆ ಹೋಗು ಅಂತಿಯಾ? ಎಂದು ಏಕವಚನದಲ್ಲೇ ಏರುಧ್ವನಿಯಲ್ಲಿ ಆಕ್ರೋಶಿತರಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್ಐ, ಅಲ್ಲ ಸರ್, ನಾನು ನಿಮಗೆ ಪ್ರತ್ಯೇಕವಾಗಿ ಹೇಳಿಲ್ಲ. ನನ್ನ ಕರ್ತವ್ಯ ನಾನು ಮಾಡ್ತಿದ್ದೇನೆ ಎಂದಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿದ ಠಾಣೆಯ ಇನ್ಸ್‌ಪೆಕ್ಟರ್ ವಾಗ್ವಾದವನ್ನು ನಿಲ್ಲಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/04/2022 10:25 am

Cinque Terre

158.15 K

Cinque Terre

95

ಸಂಬಂಧಿತ ಸುದ್ದಿ