ಹುಬ್ಬಳ್ಳಿ : ಬೈ ಏಲೆಕ್ಷನ್ ಹೊತ್ತಲ್ಲೆ ರಾಜ್ಯ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಸಂಚಲನವೇ ಸೃಷ್ಠಿಯಾಗಿದೆ. ಇಂದು ವಿಪಕ್ಷ ನಾಯಕ ಮಾಡಿದ ಆರೋಪ ರಾಜ್ಯ ಸರ್ಕಾರವನ್ನೆ ಶೇಕ್ ಮಾಡೋ ಹಂತಕ್ಕೆ ಹೋಗಿದ್ದು. ಸದ್ಯ ಸರ್ಕಾರದ ವಿರುದ್ದ ವಿಪಕ್ಷಗಳು ಮುಗಿಬಿಳಲು ಶುರುಮಾಡಿವೆ. ಆಡಳಿತರೂಢ ಪಕ್ಷದ ನಾಯಕರೇ ಈ ಬಿಟ್ ಕಾಯಿನ್-ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಹೌದು...ರಾಜ್ಯದ ಎರಡೂ ಕ್ಷೇತ್ರಗಳ ಬೈ ಏಲೆಕ್ಷನ್ ಪ್ರಚಾರ ನಿನ್ನೆಯಷ್ಟೆ ಮುಗಿದಿದೆ. ನಿನ್ನೆಯತನಕ ನಾಯಕರ ವಾಕ್ಸಮರ, ಪರಸ್ಪರ ನಿಂದನೆ ನಿನ್ನೆಗೆ ಮುಕ್ತಾಯವಾಗುತ್ತಿದ್ದಂತೆ. ಸದ್ಯ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಹಂಗಾಮ ಶುರವಾಗುವ ಹಂತಕ್ಕೆ ಹೋಗಿದೆ. ಎಸ್ ರಾಜ್ಯ ರಾಜಕೀಯದಲ್ಲಿ ನಿನ್ನೆಯಿಂದ ಚರ್ಚೆಯಾಗುತ್ತಿರುವ ಹೊಸ ಅಸ್ತ್ರವೇ ಬಿಟ್ ಕಾಯಿನ್ ಹಾಗೂ ಡ್ರಗ್ಸ್ ದಂಧೆ. ಕಳೆದ ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನ ಸಿಸಿಬಿ ಪೊಲೀಸರು ಬಂದಿಸಿದ್ದ ಕುಖ್ಯಾತ ಹ್ಯಾಕರ್ ಸದ್ಯ ಈ ಕೇಸ್ ನ ಸೆಂಟೆರ್ ಪಾಯಿಂಟ್ ಆಗಿದ್ದಾನೆ. ಆದರೆ ಕಳೆದ ಹಲವಾರು ತಿಂಗಳಿಂದ ತಣ್ಣಗಿದ್ದ ಕೇಸ್ ಸದ್ಯ ಒಮ್ಮೆಲ್ಲೆ ಬ್ಲಾಸ್ಟ್ ಆಗಿದ್ದು. ಆಡಳಿತರೂಢ ಪಕ್ಷದ ಮಹಾನ್ ನಾಯಕರೇ ನೆರಳೆ ಈ ದಂಧೆಯ ಹಿಂದಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಹೀಗಾಗೆ ವಿಪಕ್ಷ ನಾಯಕರು ರಾಜ್ಯ ಸರ್ಕಾರದ ವಿರುದ್ದ ಮುಗಿಬಿದ್ದಿದ್ದು, ಈ ಬಿಟ್ ಕಾಯಿನ್ ದಂಧೆ ಹೊರಗಡೆ ಬಂದರೆ ಬೊಮ್ಮಾಯಿ ಸರ್ಕಾರಕ್ಕೆ ಕಂಟಕವಾಗುತ್ತೆ ಎನ್ನೋ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೆ ಏಕೆ ಕೇಂದ್ರ ತನಿಖಾ ಸಂಸ್ಥೆಗಳೇ ಪ್ರಭಾವಿ ರಾಜಕಾರಿಣಿಗಳ ಒತ್ತಡಕ್ಕೆ ಮಣಿದು ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡುತ್ತಿರೋದು ಕಳವಳಕಾರಿಯಾಗಿದೆ ಎಂದು ವಿಪಕ್ಷ ನಾಯಕ ಟ್ವಿಟ್ ಮಾಡಿ ಸರ್ಕಾರ ವಿರುದ್ದ ಹರಿಹಾಯ್ದಿದ್ದಾರೆ.
ದೇಶ ವಿದೇಶದ ಹಲವಾರು ಬ್ಯಾಂಕ್ ಗಳನ್ನ ಹ್ಯಾಕ್ ಮಾಡಿ ಕ್ರಿಫ್ಟೋ ಕರೆನ್ಸಿ ಕಳ್ಳತನ ಮಾಡಿರೊ ಆರೋಪ ಎದರುಸಿತ್ತಿರೋ ಹ್ಯಾಕರ್ ಗೆ ಹಲವಾರು ಪ್ರಭಾವಿ ರಾಜಕಾರಣಿಗಳ ನಂಟಿದೆ ಎನ್ನೋದು ಬಯಲಾಗಿದೆ, ಹೀಗಾಗೇ ಸಧ್ಯ ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ದಂಧೆ ಕೇಸ್ ಹೊಸದೊಂದ ರಾಜಕೀಯ ವಾರ್ ಗೆ ವೇದಿಕೆಯಾಗೊ ಲಕ್ಷಣ ಗೋಚರಿಸುತ್ತಿದೆ.ಆದ್ರೆ ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೇ ನಿಡಿರೋ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಟ್ ಕಾಯಿನ್ ಹಾಗೂ ಡ್ರಗ್ಸ್ ದಂಧೆಯಲ್ಲಿ ಯಾರನ್ನ ರಕ್ಷಣೆ ಮಾಡೋ ಪ್ರಶ್ನೆಯೇ ಇಲ್ಲ ಎಂದ್ರು. ಅಷ್ಟೆ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಇಡಿಗೆ ರೆಫರ್ ಮಾಡಿದ್ದೆವೆ ನಾವು, ಆ ಬಗ್ಗೆ ತನಿಖೆ ಮಾಡ್ತಿವೀ ಅಂತಾರೆ..
ಒಟ್ಟಿನಲ್ಲಿ ನೂರಾರು ಕೋಟಿಯ ದಂಧೆ ಮಾದಕ ಲೋಕದ ನಂಟು ಸಧ್ಯ ಮತ್ತೊಮ್ಮೆ ಹಲ್ ಚಲ್ ಸೃಷ್ಟಿಸೊ ಸೂಚನೆ ನೀಡ್ತಿದೆ. ಸಧ್ಯ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಈ ದಂಧೆಯ ಬಗ್ಗೆ ಸರ್ಕಾರದ ಮೇಲೆ ಮುಗಿಬಿಳುತ್ತಿದ್ದು, ಸರ್ಕಾರ ನಡೆಸುವ ತನಿಖೆಯಲ್ಲಿ ನಂಬಿಕೆಯಿಲ್ಲ ಬದಾಲಗಿ ನ್ಯಾಯಂಗ ತನಿಖೆಯಾಗಬೇಕು ಎನ್ನೋ ಒತ್ತಾಯ ಮಾಡುತ್ತಿದ್ದಾರೆ.
Kshetra Samachara
28/10/2021 09:14 pm