ಹುಬ್ಬಳ್ಳಿ : ಹಳೇಹುಬ್ಬಳ್ಳಿಯಲ್ಲಿ ಕೋಮು ಗಲಭೆಯಲ್ಲಿ ಪಾಕಿಸ್ತಾನದ ISI ಕೈವಾಡವಿದೆಯೆ? ಗಲಾಟೆ ಸಂದರ್ಭದಲ್ಲಿ ಕೆಲವು ಮುಸ್ಲಿಂ ಯುವಕರು ISI ಪರ ಹಾಗೂ RSS ವಿರೋಧಿ ಘೋಷಣೆ ಕೂಗಿದ್ದು ಕೇಳಿದರೆ ಗಲಭೆ ಹಿಂದೆ ದೇಶ ವಿರೋಧಿ ಷಡ್ಯಂತ್ರವಿರುವುದು ಖಚಿತವಾದಂತಾಗಿದೆ.
ಕಳೆದ ಶನಿವಾರ ನಡೆದ ದೊಂಬಿಯ ಮತ್ತೊಂದು ಎಕ್ಸಕ್ಲೂಸಿವ್ ದೃಶ್ಯ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಲಭ್ಯವಾಗಿದೆ. ಬಹುತೇಕ ಯುವಕರು ISI ಜಿಂದಾಬಾದ್ RSS ಮುರ್ದಾಬಾದ್ ಘೋಷಣೆ ಕೂಗಿದ್ದು ಸ್ಪಷ್ಟವಾಗಿ ಕೇಳಿಬರುತ್ತಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಉದ್ದೇಶ ಕೇವಲ ವಾಟ್ಸಪ್ ಚಿತ್ರ ವಿರೋಧ ವ್ಯಕ್ತ ಮಾಡುವುದೋ ಅಥವಾ ಪಾಕಿಸ್ತಾನವನ್ನು ಬೆಂಬಲಿಸುವುದೋ? ಇದಕ್ಕೆ ಮುಸ್ಲಿಂ ನಾಯಕರೆ ಉತ್ತರಿಸಬೇಕಾಗಿದೆ. ದೇಶದ್ರೋಹಕ್ಕೆ ಮುಂದಾಗಿರುವವರ ಹೆಡೆಮುರಿ ಕಟ್ಟುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕಿದೆ.
ದೇಶ ವಿರೋಧಿ ಘೋಷಣೆ ಕೂಗುವವರು ಯಾರು ಎಂಬುದು ವಿಡಿಯೋದಲ್ಲಿ ಸ್ಪಷ್ಪವಾಗಿದೆ. ಈಗಾಗಲೇ ಅವರನ್ನು ಹೆಡಮುರಿ ಕಟ್ಟಿದ್ದರೆ ಚಿಂತೆ ಇಲ್ಲ. ಒಂದು ವೇಳೆ ತಲೆಮರೆಸಿಕೊಂಡು ಓಡಾಡುತ್ತಿದ್ದರೆ ಒದ್ದು ಎಳೆದು ತರುವ ಕೆಲಸ ಮಾಡಬೇಕು.
ಇದು ದೇಶದ್ರೋಹದ ವಿಷಯವಾಗಿದೆ. ರಾಜ್ಯ ಸರಕಾರ ಸಹ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತತಕ್ಷಣವೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/04/2022 01:33 pm