ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದ ಒಂದೊಂದೆ ವೀಡಿಯೋ ಇದೀಗ ವೈರಲ್ ಆಗುತ್ತಿವೆ. ಗಲಾಟೆಯಾದ ದಿನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದ ಒಂದು ಕೋಮಿನ ಜನ ಅದರಲ್ಲೂ ಮೀಸೆಯೇ ಚಿಗುರದ ಯುವಕರ ದಂಡು ಘೋಷಣೆ ಕೂಗುತ್ತಿದ್ದ ವೀಡಿಯೋಗಳು ಇದೀಗ ವೈರಲ್ ಆಗಿವೆ.
ಮಸೀದಿ ಮೇಲೆ ಕೇಸರಿ ಧ್ವಜ ಹಾರಿದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದರೂ ಕೇಳದ ಪ್ರತಿಭಟನಾಕಾರರು, ಆರೋಪಿಯನ್ನು ತಮ್ಮ ಕೈಗೆ ನೀಡುವಂತೆ ಘೋಷಣೆ ಹಾಕಿದ್ದಾರೆ. ಅಲ್ಲದೇ ಇಸ್ಲಾಂ ಘೋಷಣೆಗಳನ್ನು ಕೂಗಿ ಗಲಭೆ ಹಬ್ಬುವಂತೆ ಮಾಡಿದ್ದ ದೃಶ್ಯಗಳು ಇದೀಗ ವೈರಲ್ ಆಗಿವೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/04/2022 01:05 pm