ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಇನ್ನೂ ಅನೇಕರನ್ನು ತನಿಖೆ ನಡೆಸುವ ಮೂಲಕ ಅಚ್ಛರಿಯ ಜೊತೆಗೆ ಪ್ರಕರಣದ ತನಿಖೆಯನ್ನು ನಿಗೂಢವಾಗಿ ನಡೆಸುತ್ತಿದೆ.
ನಿನ್ನೆ ತಡರಾತ್ರಿ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅವರಿಗೆ ಮತ್ತೆ ಸಿಬಿಐ ಬುಲಾವ್ ನೀಡಿದ್ದು, ಮಲ್ಲಮ್ಮ ಗೌಡರ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರ ಬಗ್ಗೆ ಗೌರಿ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಇನ್ನು ನಿನ್ನೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸಿಬಿಐ ವಿಚಾರಣೆ ಎದುರಿಸಿ ಹೋಗಿದ್ದ ಬಸವರಾಜ ಮುತ್ತಗಿ ಅವರನ್ನು ನಾಗರಾಜ ಗೌರಿ ಅವರೊಂದಿಗೆ ಮತ್ತೆ ಸಿಬಿಐ ವಿಚಾರಣೆಗೊಳಪಡಿಸಿದೆ.
Kshetra Samachara
11/11/2020 08:44 am