ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೆಸಿಸಿ ಬ್ಯಾಂಕ್‌ನಿಂದ ಮೊಬೈಲ್ ಬ್ಯಾಂಕಿಂಗ್ ವಾಹನಗಳಿಗೆ ಚಾಲನೆ

ಧಾರವಾಡ: ಸಹಕಾರ ಕ್ಷೇತ್ರದಲ್ಲಿ ವಿವಿಧ ಸಾಧನೆಗಳನ್ನು ಮಾಡಿರುವ ಕೆಸಿಸಿ ಬ್ಯಾಂಕ್ ಇದೀಗ ಡಿಜಿಟಲ್ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ತನ್ನ ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸಲು ಮುಂದಾಗಿದೆ. ಅಲ್ಲದೇ ಇದೀಗ ಮೂರು ಮೊಬೈಲ್ ಬ್ಯಾಂಕಿಂಗ್ ವಾಹನಗಳನ್ನು ರಸ್ತೆಗಿಳಿಸುವ ಮೂಲಕ ಗ್ರಾಹಕರಿಗೆ ಹತ್ತಿರವಾಗಿದೆ.

ಹೌದು! ಶನಿವಾರ ಮೊಬೈಲ್ ಬ್ಯಾಂಕಿಂಗ್ ಹಾಗೂ ಸಂಚಾರಿ ಎಟಿಎಂ ವಾಹನಗಳಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಇತರರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ಸರ್ಕಾರ ಕಳೆದ ವರ್ಷ ನೂತನ ಸಹಕಾರಿ ಸಚಿವಾಲಯವನ್ನು ಆರಂಭಿಸಿ ದೇಶದಲ್ಲಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ.

ಸದ್ಯ ದೇಶದಲ್ಲಿ 60 ಸಾವಿರ ಸಹಕಾರಿ ಬ್ಯಾಂಕ್ ಇವೆ. ಅವುಗಳನ್ನು 3 ಲಕ್ಷಕ್ಕೆ ಏರಿಸುವ ಗುರಿ ಇದೆ. ಸಹಕಾರಿ ವಲಯದ

ಬ್ಯಾಂಕ್ ಮುಳುಗಿದರೆ ಠೇವಣಿದಾರರಿಗೆ ತೊಂಬತ್ತು‌ ದಿನಗಳಲ್ಲಿ 5 ಲಕ್ಷ ರೂಪಾಯಿ ನೀಡಲಾಗುವುದು ಇದನ್ನು ಜನರಿಗೆ ತಿಳಿಸಬೇಕಿದೆ.

ಸಹಕಾರಿ ಸಂಘಗಳಿಗೆ 23 ಸಾವಿರ ಕೋಟಿ ರೂಪಾಯಿ ನೀಡಲಾಗಿತ್ತು. 7 ವರ್ಷದ ಅವಧಿಯಲ್ಲಿ 73 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ಕೆಸಿಸಿ ಬ್ಯಾಂಕ್ ಶತಮಾನದ

ಇತಿಹಾಸ ಹೊಂದಿದ ಮೊಟ್ಟ ಮೊದಲ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಎಂದರು.

ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿದ್ದರು.

Edited By : Shivu K
Kshetra Samachara

Kshetra Samachara

06/03/2022 08:05 pm

Cinque Terre

86.51 K

Cinque Terre

2

ಸಂಬಂಧಿತ ಸುದ್ದಿ