ಕಲಘಟಗಿ:ಪಟ್ಟಣದ ಯುವಶಕ್ತಿ ವೃತ್ತದ ಹತ್ತಿರ ಇರುವ ನೀರು ಶುದ್ದೀಕರಣ ಘಟಕವನ್ನು ಶೀಘ್ರ ದುರಸ್ಥಿಮಾಡುವಂತೆ ಪ ಪಂ ಅಧ್ಯಕ್ಷೆ ಅನಸೂಯಾ ಹೆಬ್ಬಳ್ಳಿಮಠ ಸೂಚನೆ ನೀಡಿದರು.
ಯುವಶಕ್ತಿ ಸರ್ಕಲ್ ಹತ್ತಿರ ಪಟ್ಟಣ ಪಂಚಾಯತಿ ವಾಣಿಜ್ಯ ಸಂಕೀರ್ಣದಲ್ಲಿ ರುವ ನೀರು ಶುದ್ಧೀಕರಣ ಘಟಕ ಕಳೆದ ಒಂದು ವರ್ಷದಿಂದ ಹಾಳಾಗಿದ್ದು, ದುರಸ್ತಿ ಮಾಡದೆ ಹಾಗೆ ಬಿಡಲಾಗಿದೆ.
ಹಾಳಾಗಿರುವ ಶುದ್ಧಿಕರಣ ಘಟಕ ದುರಸ್ತಿ ಮಾಡಿಸುವಂತೆ ನಾಗರೀಕರು ಒತ್ತಾಯಿಸಿದ್ದು,ಈ ಕುರಿತು ಪಬ್ಲಿಕ್ ನೆಕ್ಸ್ಟ್ ಕೆಲ ದಿನಗಳ ಹಿಂದೆ ವರದಿ ಬಿತ್ತಿರಿಸಿತ್ತು ಇದರಿಂದ ಎಚ್ಚತ್ತ ಪ ಪಂ ಅಧ್ಯಕ್ಷೆ,ಅಧಿಕಾರಿಗಳು ಹಾಗೂ ಸದಸ್ಯರು ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಪಟ್ಟಣದ ಎಲ್ಲ ಶುದ್ದಿಕರಣ ಘಟಕಗಳ ದುರಸ್ತಿ ಮಾಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
Kshetra Samachara
23/12/2020 10:57 am