ಧಾರವಾಡ: ಶಾಸಕ ಅಮೃತ ದೇಸಾಯಿ ಅವರ ತವರೂರಾದ ಧಾರವಾಡ ತಾಲೂಕಿನ ಹಂಗರಕಿ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿಗೆ ಮತದಾನ ನಡೆದಿದೆ.
ಇಷ್ಟು ವರ್ಷಗಳಿಂದ ಹಂಗರಕಿ ಗ್ರಾಮದಿಂದ ಅವಿರೋಧ ಆಯ್ಕೆಗಳೇ ಆಗುತ್ತಿದ್ದವು. ಆದರೆ, ಈ ವರ್ಷ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಹಂಗರಕಿ ಗ್ರಾಮದ ಜನ ಖುಷಿಯಿಂದ ಮತದಾನ ಮಾಡಿದರು.
ಇದರ ಜೊತೆಗೆ ಶಾಸಕ ಅಮೃತ ದೇಸಾಯಿ ಕೂಡ ದಂಪತಿ ಸಮೇತ ತಮ್ಮ ಸ್ವಗ್ರಾಮಕ್ಕೆ ಆಗಮಿಸಿ ಗ್ರಾಮ ಪಂಚಾಯ್ತಿ ಚುನಾವಣೆಗೆ ಮತದಾನ ಮಾಡಿದ್ದಾರೆ.
Kshetra Samachara
22/12/2020 05:35 pm