ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಗುಡುಗಿದ ಕನಕಪುರ ಬಂಡೆ: ಏರ್ಪೋರ್ಟ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಸಿ

ಹುಬ್ಬಳ್ಳಿ: ಮೇಲ್ಮನೆಯಲ್ಲಿ ನಮ್ಮಗೆ ಸಂಖ್ಯಾಬಲ ಇಲ್ಲವೆಂದು ಗೊತ್ತಿದೆ. ಅದ್ರೆ ಬಿಜೆಪಿಯವರು ಸಭಾಪತಿಯವರು ಸದನಕ್ಕೆ ಬರುವ ಮುನ್ನವೇ ಸದನ ಅರಂಭ ಯಾಕೆ ಮಾಡಬೇಕಿತ್ತು.‌ ಬಿಜೆಪಿಯವರು ಮೊದಲು ನೋಟಿಸ್ ನೀಡಿ ಇಲ್ಲವೇ ಕಾನೂನು ಹೋರಾಟ ಮಾಡಬೇಕಿತ್ತು. ಅದು ಬಿಟ್ಟು ಬಿಜೆಪಿಯವರು ವಿಧಾನಪರಿಷತ್ ಅಧಿವೇಶನದಲ್ಲಿ ಗಲಾಟೆ ಮಾಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಚಿಕೇಗೇಡು ಸಂಗತಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಲು ಹುಬ್ಬಳ್ಳಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತನಾಡಿ,ಬಿಜೆಪಿಯವರು ರಾಜ್ಯಪಾಲರ ಬಳಿ ಹೋಗಿದ್ದಾರೆ. ಎನೂ ಆಗುತ್ತೆ ನೋಡೋಣ. ಆದ್ರೆ ಸಭಾಪತಿ ಪ್ರತಾಪ ಶೆಟ್ಟಿಯವರಿಗೆ ಅಧಿಕಾರದ ಆಸೆಯಿಲ್ಲ.‌ಅವರು ಅಧಿಕಾರಕ್ಕೆ ಅಂಟ್ಟಿಕೊಳ್ಳುವವರಲ್ಲವೆಂದಿದ್ದಾರೆ.

ವಿಧಾನಪರಿಷತ್ ನಲ್ಲಿ ಗಲಾಟೆಯಾಗಲು ಬಿಜೆಪಿಯವರು ಕಾರಣ, ಬಿಲ್ ಪಾಸ್ ಮಾಡುವ ನಿಟ್ಟಿನಲ್ಲಿ ತರಾತುರಿಯಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದು ಸರಿಯಲ್ಲ.‌ಮೇಲ್ಮನೆಯಲ್ಲಿ ನಮ್ಮಗೆ ಸಂಖ್ಯಾಬಲ ಇಲ್ಲ ಅಂತ ಗೊತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ಬಹುಮತವಿಲ್ಲವೆಂದು ಒಪ್ಪಿಕೊಂಡಿದ್ದಾರೆ.

ಇನ್ನೂ ಗೋಹತ್ಯೆ ಮಸೂದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ‌ ಡಿಕೆಶಿ. ಬಿಜೆಪಿಯವರು ಒಂದು ವರ್ಗವನ್ನ ಸೀಮಿತ ಮಾಡಿಕೊಂಡು ಮಸೂದೆ ಜಾರಿ ಮಾಡುತ್ತಿದ್ದಾರೆ. ಅವರು ಎನೂ ಮಾಡ್ತಾರೆ ಮಾಡಲಿ ನೋಡೋಣ. ಗೋಹತ್ಯೆ ಮಸೂದೆ ಜಾರಿಯಿಂದ ರೈತ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ಗೋಹತ್ಯೆ ಮಸೂದೆ‌ ಜಾರಿಗೆ ವಿರೋಧ ವ್ಯಕ್ತಪಡಿಸಿದರು.

ನಾನು ಪಕ್ಷ ಬಿಟ್ಟರು ಕಾಂಗ್ರೆಸ್ ಇರುತ್ತೆ.. ಕಾಂಗ್ರೆಸ್ ಪಕ್ಷವನ್ನ ಕಾರ್ಯಕರ್ತರು. ನಾಯಕರು ತೊರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ. ಕಾಂಗ್ರೆಸ್ ಪಕ್ಷಕ್ಕೆ‌ ನೂರಾರು ವರ್ಷಗಳ ಇತಿಹಾಸವಿದೆ. ಪಕ್ಷದಿಂದ ಹೊರಹೋಗುವವರು ಹೋಗ್ತಾರೆ. ಯಾರು ಪಕ್ಷ ಬಿಟ್ಟರು ಕಾಂಗ್ರೆಸ್ ಪಕ್ಷ ಇರುತ್ತೆ. ನಾನು ಪಕ್ಷ ಬಿಟ್ಟು ಹೋದ್ರು ಕಾಂಗ್ರೆಸ್ ಪಕ್ಷ ಇರುತ್ತೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹುಬ್ಬಳ್ಳಿಯ ವಿಮಾನ‌ ನಿಲ್ದಾಣದಿಂದ ಹೊರಬರುತ್ತಿದ್ದಂತೆ

ಕಾಂಗ್ರೆಸ್ ನಾಯಕರು. ಮಹಿಳಾ ಕಾರ್ಯಕರ್ತೆಯವರು ಡಿಕೆಶಿ ಭೇಟಿಗೆ ಮುಗಿಬಿದ್ದು ಹಾರ ಶಾಲು ಹಾಕಿ ಸನ್ಮಾನಿಸಿದರು.

Edited By :
Kshetra Samachara

Kshetra Samachara

17/12/2020 10:09 pm

Cinque Terre

75.5 K

Cinque Terre

7

ಸಂಬಂಧಿತ ಸುದ್ದಿ