ಹುಬ್ಬಳ್ಳಿ- ಕಾಂಗ್ರೆಸ್ ಪ್ರೇರೆಪೀತ ಭಾರತ್ ಬಂದ್ ಇಂದು ದೇಶದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಇಡೀ ದೇಶದ ರೈತರು ಪ್ರಧಾನಿ ನರೇಂದ್ರ ಮೋದಿ ಮೇಲೆ ಇಟ್ಟಿರುವ ವಿಶ್ವಾಸದಿಂದ ಬಂದ್ ವಿಫಲವಾಗಿದೆ.
2022 ರಲ್ಲಿ ರೈತರ ಆದಾಯವನ್ನು ದ್ವಿಗುಣಗೋಳಿಸುವ ನಿಟ್ಟಿನಲ್ಲಿ ಕೃಷಿ ಸುಧಾರಣೆ, ಮಹತ್ವದ ಮಸೂದೆಗಳನ್ನ ಅನುಷ್ಠಾನಕ್ಕೆ ತಂದಿದ್ದಾರೆ. ನರೇಂದ್ರ ಮೋದಿ ಅವರ ತಂದಿರುವ ಕ್ರಮಕ್ಕೆ ಮನ್ನಣೆ ಸಿಕ್ಕಿದೆ. ಇಂದು ಬಂದ್ ಕರೆಕೊಡುವ ಅವಶ್ಯಕತೆ ಇಲ್ಲದಿದ್ದರು ಕರೆ ನೀಡಲಾಗಿತ್ತು. ಆದರೆ ದೇಶದ ರೈತರು ಹಾಗೂ ಜನ ಸರಿಯಾದ ಉತ್ತರ ಕೊಟ್ಟಿದ್ದಾರೆ. ದೇಶದ ಜನ ಹಾಗೂ ರೈತರಿಗೆ ಬಿಜೆಪಿ ಪಕ್ಷದ ಮೇಲೆ ವಿಶ್ವಾಸವಿದೆ ಎಂದರು.
Kshetra Samachara
08/12/2020 07:08 pm