ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನಾವೆಲ್ಲ ತಾಳಿ ಕಟ್ಟಿಸಿಕೊಂಡು ಬಿಜೆಪಿಗೆ ಬಂದಿದ್ದೇವೆ;ಬಿ.ಸಿ.ಪಾಟೀಲ

ಹಾವೇರಿ: ನಾವೆಲ್ಲರೂ ತಾಳಿ ಕಟ್ಟಿಸಿಕೊಂಡು ಬಿಜೆಪಿ ಪಕ್ಷಕ್ಕೆ ಬಂದಿದ್ದೇವೆ.ಇಲ್ಲಿ ಮೂಲ, ವಲಸಿಗ ಎನ್ನುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.ಬಿಜೆಪಿ ವರಿಷ್ಠರ ಸಿಕ್ರೇಟ್ ಸಭೆ ಕುರಿತು ಜಿಲ್ಲೆಯ ಹಿರೇಕೇರೂರಿನಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಇದು ಮಾಧ್ಯಮದವರ ಹಾಗೂ ಕಾಂಗ್ರೆಸ್ ನವರ ಸೃಷ್ಟಿ.ಏನಾದರೂ ಮಾಡಿ ಬಿಜೆಪಿಯಲ್ಲಿ ಬೆಂಕಿ ಹಚ್ಚಬೇಕು ಅಂತ ಕಾಯ್ತಾ ಇದ್ದಾರೆ.ನಾವು ಯಾವುದೇ ರಹಸ್ಯ ಸಭೆ ಮಾಡಿಲ್ಲ ಊಟಕ್ಕೆ ಎಲ್ಲರೂ ಸೇರಿ ಕೊಂಡಿದ್ದೇವಿ ಅಷ್ಟೇ.ನಮ್ಮ ಜೊತೆ ಬಾಂಬೆಗೆ ಬಂದವರಿಗೆ ಮಂತ್ರಿಗಳನ್ನಾಗಿ ಮಾಡಬೇಕು ಎನ್ನುವ ದೃಷ್ಟಿಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಬಗ್ಗೆ ಚರ್ಚೆ ಮಾಡಿದವು ಹೊರತು ಬೇರೇನೂ ಇಲ್ಲ ಎಂದರು.

ಸಭೆ ಮಾಡಿದ್ದರ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ರಮೇಶ್ ಜಾರಕಿಹೊಳಿ ಮನೇಲಿ ದಿನಾನು ಮೀಟಿಂಗ್ ಇರುತ್ತವೆ.ಬಂದವರನ್ನು ವಾಪಸ್ ಹೋಗು ಅಂತ ಹೇಳ್ತಾರಾ.ಹಾಗೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

Edited By : Manjunath H D
Kshetra Samachara

Kshetra Samachara

30/11/2020 06:43 pm

Cinque Terre

19.68 K

Cinque Terre

5

ಸಂಬಂಧಿತ ಸುದ್ದಿ