ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಪಂ ಸದಸ್ಯರ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಅಣ್ಣಪ್ಪ ದೇಸಾಯಿ, ಮಂಜವ್ವ ಹರಿಜನ, ಜ್ಯೋತಿ ಬೆಂತೂರ ಹಾಗೂ ರತ್ನಾ ಪಾಟೀಲ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಧಾರವಾಡದ ಹೈಕೋರ್ಟ ಪೀಠ ವಜಾಗೊಳಿಸಿದೆ.

ಈ ನಾಲ್ಕೂ ಜನ ಸದಸ್ಯರು ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಅಂದಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಹಾಗೂ ಅಂದಿನ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದ ಈರಣ್ಣ ಜಡಿ ಅವರು, ಈ ನಾಲ್ಕೂ ಜನ ಸದಸ್ಯರನ್ನು ಅನರ್ಹಗೊಳಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇವರ ದೂರಿನ ಅನ್ವಯ ಈ ನಾಲ್ಕೂ ಜನ ಸದಸ್ಯರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿತ್ತು. ಇದನ್ನು ಪ್ರಶ್ನಿಸಿ ನಾಲ್ಕೂ ಜನ ಸದಸ್ಯರು ಧಾರವಾಡ ಹೈಕೋರ್ಟನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಈ ನಾಲ್ಕೂ ಜನ ಸದಸ್ಯರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ ಏಕಸದಸ್ಯ ಪೀಠ ವಜಾಗೊಳಿಸಿದೆ.

ಈ ನಾಲ್ಕೂ ಜನ ಬಿಜೆಪಿ ಸದಸ್ಯರು ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಗದ್ದುಗೆ ಏರಲು ಸಹಾಯ ಮಾಡಿದ್ದರು. ಇವರಿಗೆ ಬಿಜೆಪಿ ವಿಪ್ ಕೂಡ ಜಾರಿ ಮಾಡಿತ್ತು. ಆದರೂ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದರು. ಅಂದು ಬಿಜೆಪಿಯವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರಿಂದ ಈ ಸದಸ್ಯರನ್ನು ಆಯೋಗ ಅನರ್ಹಗೊಳಿಸಿತ್ತು. ಇದೀಗ ಚುನಾವಣಾ ಆಯೋಗದ ಆದೇಶವನ್ನೇ ಹೈಕೋರ್ಟ ಕೂಡ ಎತ್ತಿ ಹಿಡಿದಿದೆ.

ಚುನಾವಣಾ ಆಯೋಗ ತೆಗೆದುಕೊಂಡ ತೀರ್ಮಾನ ಸರಿಯಾಗಿದೆ ಎಂದು ನಾಲ್ಕೂ ಜನ ಸದಸ್ಯರು ಸಲ್ಲಿಸಿದ್ದ ರಿಟ್ ಅರ್ಜಿಯನ್ನೇ ಹೈಕೋರ್ಟ ಏಕಸದಸ್ಯ ಪೀಠ ವಜಾಗೊಳಿಸಿದೆ.

Edited By : Nagaraj Tulugeri
Kshetra Samachara

Kshetra Samachara

20/11/2020 07:30 pm

Cinque Terre

46.87 K

Cinque Terre

2

ಸಂಬಂಧಿತ ಸುದ್ದಿ