ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿ ರಸ್ತೆಗಳ ಅಭಿವೃದ್ಧಿ:ಸಚಿವ ಶೆಟ್ಟರ್

ಹುಬ್ಬಳ್ಳಿ: ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಗೆ ಅನುಮೋದನೆ ದೊರೆತಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು. 150 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ಎಲ್ಲಾ ಉಪ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಬೃಹತ್ ಮತ್ತು‌ ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಇಂದು ಹುಬ್ಬಳ್ಳಿ ಬಾದಾಮಿ ನಗರದಲ್ಲಿ, ಯುಜಿಡಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು. ಲೋಕೋಪಯೋಗಿ ಇಲಾಖೆಯಿಂದ 50 ಕೋಟಿ ವೆಚ್ಚದಲ್ಲಿ ಗದಗ ರಸ್ತೆಯ ರೈಲ್ವೇ ಅಂಡರ್ ಬ್ರಿಡ್ಜ್ ನಿಂದ ಕೇಶ್ವಾಪುರ, ಬೆಂಗೇರಿ, ಗೋಪನಕೊಪ್ಪ, ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯಿಂದ ಉಣಕಲ್ ವರೆಗೆ ಸುಸಜ್ಜಿತ ರಸ್ತೆ ನಿರ್ಮಾಣವಾಗುತ್ತಿದೆ. ಇದರ ಅಡಿಯಲ್ಲಿ ಬಾದಮಿ ನಗರದ ಉಪ ಮುಖ್ಯ ರಸ್ತೆ ಸಹ ಅಭಿವೃದ್ಧಿ ಪಡಿಸಲಾಗುತ್ತಿದೆ. ರಸ್ತೆಯ ಕಾಮಗಾರಿಯನ್ನು ನಾಲ್ಕು ತಿಂಗಳ ಒಳಗಾಗಿ ಪೂರ್ಣಗೊಳಿಸಲಾಗುವುದು.

ಲಾಕ್ ಡೌನ್, ಕಾರ್ಮಿಕರ ಕೊರತೆ, ಮಳೆಯಿಂದಾಗಿ ನಿರ್ಮಾಣ ಕಾರ್ಯ ತಡವಾಗಿದೆ. ಅವಳಿ ನಗರದ ರಸ್ತೆಗಳ ಅಭಿವೃದ್ಧಿಗಾಗಿ 400 ಕೋಟಿ ಸಿ.ಆರ್.ಎಫ್ ಅನುದಾನ ಮಂಜೂರಾಗಿದೆ. ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿ.ಟಿ. ಅಡಿಯಲ್ಲಿ ರೈಲ್ವೇ ಸ್ಟೇಷನ್ ರೋಡ್, ಲ್ಯಾಮಿಂಗಟನ್ , ಕೋಪ್ಪಿಕರ್ ರಸ್ತೆಗಳನ್ನು‌ ಅಭಿವೃದ್ಧಿ ಪಡಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಅನುದಾನದಲ್ಲಿ ಮಧುರಾ ಕಾಲೋನಿ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಮುಂದಿನ 8 ರಿಂದ 9 ತಿಂಗಳಲ್ಲಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಸಂಪೂರ್ಣವಾಗಿ ಪಡಿಸಲಾಗುವುದು ಎಂದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ತರುವಾಯ ಹೊಟೇಲ್ ತೆರೆಯಲು ಅನುಮತಿ ನೀಡಲಾಯಿತು. ಆರಂಭದಲ್ಲಿ ಜನರು ಹೋಟೆಲ್ ಗಳಿಗೆ ಬರಲು ಅಂಜುತ್ತಿದ್ದರು. ಹಾಗೇಯೆ ಎಂಟು ತಿಂಗಳ ತರುವಾಯ ಕಾಲೇಜುಗಳನ್ನು ಆರಂಭಿಸಿರುವುದರಿಂದ ವಿದ್ಯಾರ್ಥಿಗಳಲ್ಲಿ ಭಯವಿದೆ. ಸರ್ಕಾರ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಕಾಲೇಜು ಹಾಗೂ ಹಾಸ್ಟೆಲ್ ಗಳನ್ನು ತೆರೆಯಲು ಅನುಮತಿ ನೀಡಿದೆ. ಕೋವಿಡ್ ಪ್ರಕರಣಗಳು ಕಡಿಮೆಯಾಗಿ ಭಯದ ವಾತಾವರಣ ಹೋದರೆ, ವಿದ್ಯಾರ್ಥಿಗಳು ಕಾಲೇಜುಗಳಿಗೆ ಆಗಮಿಸುವರು ಎಂದರು.

Edited By : Nagaraj Tulugeri
Kshetra Samachara

Kshetra Samachara

17/11/2020 04:59 pm

Cinque Terre

23.47 K

Cinque Terre

1

ಸಂಬಂಧಿತ ಸುದ್ದಿ