ಹುಬ್ಬಳ್ಳಿ : ಮಾಜಿ ಸಚಿವ. ದಿವಂಗತ ಸಿ.ಎಸ್.ಶಿವಳ್ಳಿಯವರ 59ನೇ ಜನ್ಮದಿನದ ಕಾರ್ಯಕ್ರಮವನ್ನು ಕುಂದಗೋಳ ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರು ಕೇಕ್ ಕತ್ತರಿಸುವ ಮೂಲಕ ಶಾಸಕಿ ಕುಸುಮಾವತಿ ಶಿವಳ್ಳಿಯವರ ನಿವಾಸದಲ್ಲಿ ಜನ್ಮದಿನದ ಸಂಭ್ರಮಕ್ಕೆ ಸಾಕ್ಷಿಯಾದರು.
ಧಾರವಾಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಶಾಸಕರ ಆಪ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವ ಸಿ.ಎಸ್.ಶಿವಳ್ಳಿಯವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು, ವಿಶೇಷವೆಂದರೆ ಶಿವಳ್ಳಿ ಅವರು ಇಷ್ಟು ಪಡುತ್ತಿದ್ದ ಜಾನಪದ ಗೀತೆಗಳು, ಹಳೆಯ ಸಿನಿಮಾ ಹಾಡುಗಳು, ಒಕ್ಕಲಿಗರ ಪದಗಳು ಜನ್ಮದಿನಕ್ಕೆ ಆಗಮಿಸಿದ ಜನರನ್ನು ರಂಜಿಸಿದವು.
ಕುಂದಗೋಳ ತಾಲೂಕಿನ ಹಳ್ಳಿಗಳಲ್ಲಿನ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಸಚಿವ ಸಿ.ಎಸ್.ಶಿವಳ್ಳಿಯವರಿಗೆ ನಮಸ್ಕರಿಸಿ ಶಾಸಕಿ ಕುಸುಮಾವತಿಯವರ ಅಭಿಮಾನಕ್ಕೆ ಸೈ ಎಂದರು, ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
Kshetra Samachara
13/11/2020 02:13 pm