ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಾಡಿನ ಮೂಲಕ ವಿನಯ್ ಗೆ ಧೈರ್ಯ ತುಂಬಿದ ಅನೀಲ ಪಾಟೀಲ

ಧಾರವಾಡ: ಧಾರವಾಡದ ಮುರುಘಾಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಅನೀಲ ಪಾಟೀಲ ಅವರು, ಸಿಬಿಐ ಕಸ್ಟಡಿಯಲ್ಲಿರುವ ವಿನಯ್ ಕುಲಕರ್ಣಿ ಅವರಿಗೆ ಹಾಡಿನ ಮೂಲಕ ಧೈರ್ಯ ತುಂಬಿದ್ದಾರೆ.

ಡಾ.ರಾಜಕುಮಾರ ಅವರ ಆಡಿಸಿ ನೋಡು.. ಬೀಳಿಸಿ ನೋಡು.. ಉರುಳಿ ಹೋಗದು.. ವಿನಯ ನಗುತಲಿರುವುದು ಎಂದು ಹಾಡಿ ವಿನಯ್ ಅವರ ಅಭಿಮಾನಿಗಳ ಕರತಾಡನಗಳಿಗೆ ಪಾತ್ರರಾದರು.

ವಿನಯ್ ಅವರು ಈ ಪ್ರಕರಣದಿಂದ ಹೊರ ಬಂದು ಈಗಿರುವುದಕ್ಕಿಂತ 10 ಪಟ್ಟು ಶಕ್ತಿ ಶಾಲಿಯಾಗಿ ಬೆಳೆಯುತ್ತಾರೆ. ಚೆಂಡು ನೆಲಕ್ಕೆ ಒಗೆದಷ್ಟು ಜೋರಾಗಿ ಪುಟಿದೇಳುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ ಡಿ.ಕೆ.ಶಿವಕುಮಾರ ಅವರು. ಅದೇ ರೀತಿ ವಿನಯ್ ಮತ್ತೇ ಪುಟಿದೇಳುತ್ತಾರೆ ಎಂದರು.

Edited By : Manjunath H D
Kshetra Samachara

Kshetra Samachara

07/11/2020 07:36 pm

Cinque Terre

50.39 K

Cinque Terre

9

ಸಂಬಂಧಿತ ಸುದ್ದಿ