ಧಾರವಾಡ: ತೇವಾಂಶದ ಸಮಸ್ಯೆಯಿಂದಾಗಿ ಹೆಸರು ಖರೀದಿ ಕೇಂದ್ರಗಳಲ್ಲಿ ಕೆಲವೊಂದಿಷ್ಟು ರೈತರ ಹೆಸರು ಕಾಳುಗಳನ್ನು ಖರೀದಿ ಕೇಂದ್ರದ ಸಿಬ್ಬಂದಿ ಖರೀದಿ ಮಾಡದೇ ತಿರಸ್ಕರಿಸುತ್ತಿರುವುದನ್ನುಟ ಖಂಡಿಸಿ ನವಲಗುಂದ ತಾಲೂಕಿನ ಶಿರೂರು ಗ್ರಾಮದ ರೈತರು ಸೋಮವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಹೆಸರು ಮೂಟೆ ತಂದು ಪ್ರತಿಭಟನೆ ನಡೆಸಿದರು.
ಮಳೆಯಿಂದಾಗಿ ಹೆಸರು ಕಾಳುಗಳು ಪೂರ್ಣ ಪ್ರಮಾಣದಲ್ಲಿ ಒಣಗಿಲ್ಲ. ಹೀಗಿರುವಾಗ ತೇವಾಂಶದ ಸಮಸ್ಯೆಯಿಂದಾಗಿ ಕೆಲವೊಂದಿಷ್ಟು ರೈತರ ಹೆಸರು ಕಾಳುಗಳನ್ನು ಖರೀದಿ ಕೇಂದ್ರದವರು ತೆಗೆದುಕೊಳ್ಳುತ್ತಿಲ್ಲ. ಮನೆಯಲ್ಲೇ ಹೆಸರು ಕಾಳುಗಳನ್ನು ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಬಂದು ಎಲ್ಲಾ ಪ್ರಮಾಣದ ಹೆಸರು ಕಾಳುಗಳನ್ನು ಖರೀದಿ ಮಾಡಬೇಕು ಎಂದು ರೈತರು ಆಗ್ರಹಿಸಿದರು.
ಅಲ್ಲದೇ ಬೆಳೆವಿಮೆ, ಬೆಳೆ ಪರಿಹಾರ ಕೂಡ ಅನೇಕ ರೈತರಿಗೆ ಬರದೇ ಇರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಬಂದು ಬೆಳೆವಿಮೆ, ಬೆಳೆ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ಶಿರೂರು ಗ್ರಾಮದ ಮಲ್ಲಿಕಾರ್ಜುನಗೌಡ ಬಾಳನಗೌಡರ ನೇತೃತ್ವದಲ್ಲಿ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Kshetra Samachara
04/10/2021 08:58 pm