ಹುಬ್ಬಳ್ಳಿ: ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ನಿಮಿತ್ತ ಕೃಷಿ ಸಚಿವ ಬಿ.ಸಿ.ಪಾಟೀಲ ಕೃಷಿ ಕಾಯಕ ಮಾಡಿ ಗಮನ ಸೆಳೆದರು.
ಜಿಲ್ಲೆಯ ಕೃಷಿ ಪದ್ಧತಿ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. ಹಾಗೇ ರೈತರನ್ನು ಆಧುನಿಕ ಕೃಷಿ ಪದ್ಧತಿ, ಯಂತ್ರೋಪಕರಣಗಳ ಬಳಕೆ, ಜೈವಿಕ ಗೊಬ್ಬರ ತಯಾರಿಕೆ, ಮೀನು ಸಾಕಣಿಕೆ, ತೋಟಗಾರಿಕೆ ಕೈಗೊಳ್ಳಲು ಪ್ರೇರೆಪಿಸಿದರು.
ಶಿರಕೋಳ ಗ್ರಾಮದ ರೈತರ ಮಲ್ಲಿಕಾರ್ಜುನ ಯಕ್ಕುಂಡಿಯವರ ಜಮೀನಿಗೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ ಟ್ರ್ಯಾಕ್ಟರ್ ಚಾಲಿತ ಯಂತ್ರದ ಮೂಲಕ ಹತ್ತಿ ಕಾಟವು ಮಾಡುವುದ ಪ್ರಾತ್ಯಕ್ಷೆತೆಯನ್ನು ನಡೆಸಿದರು. ಟ್ರ್ಯಾಕ್ಟರ್ ಹತ್ತಿ ಸ್ವತಃ ಚಲಾಯಿಸಿ ಸಚಿವರು ಹತ್ತಿಗಿಡಗಳನ್ನು ಕಟಾವು ಮಾಡಿದರು. ಹತ್ತಿ ಬಿಡಿಸಿದ ನಂತರ ಗಿಡಗಳು ಹೊಲದಿಂದ ತೆಗೆದು ಹಾಕುವುದರ ಬದಲು, ಯಂತ್ರ ಬಳಸಿ ಗಿಡಗಳನ್ನು ಪುಡಿ ಮಾಡಿ ಹೊಲದಲ್ಲೇ ಚಲ್ಲುವುದರಿಂದ ಫಲವತ್ತತೆ ಹಾಗೂ ಮಣ್ಣಿಸಾರ ಹೆಚ್ಚುತ್ತದೆ ಎಂಬುದನ್ನು ರೈತರಿಗೆ ತಿಳಿಸಿದರು. ರೈತ ಮಲ್ಲಿಕಾರ್ಜುನ ಅಮ್ಮಿನಬಾವಿಯವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ಯಂತ್ರಕ್ಕೆ ಚಾಲನೆ ನೀಡಿದರು. ಗುರುಸಿದ್ದಪ್ಪ ಅಮ್ಮಿನಬಾವಿ ಅವರ ಕೃಷಿ ಹೊಂಡದಲ್ಲಿ ಮೀನು ಮರಿ ಬಿಡುವ ಚಟುವಟಿಕೆ ಮಾಡಿದ ಸಚಿವರು ಕೃಷಿಯ ಕಾಯಕ ಜೊತೆಗೆ ಪಶುಸಂಗೋಪನೆ, ಮೀನು, ಜೇನು, ರೇಷ್ಮೆ ಸಾಕಣೆಗೊಳ್ಳಲು ರೈತರ ಮನ ಒಲಿಸಿದರು.
ಮಣ್ಣಿನ ಫಲವತ್ತೆ ಹೆಚ್ಚಿಸಲು ರೈತರು ಸಾವಿರಾರು ರೂಪಾಯಿ ಮೌಲ್ಯದ ರಾಸಾಯನಿಕಗಳನ್ನು ಖರಿಧೀಸುತ್ತಾರೆ. ಆದರೆ ಪಶು ಸಂಗೋಪನೆಯಂದ ಬರುವ ಜೈವಿಕ ಗೊಬ್ಬರ ಕೃಷಿ ಭೂಮಿಯಲ್ಲಿನ ಜೀವಾಣುಗಳನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಹಸುವಿನ ಮೂತ್ರ, ಮಜ್ಜಿಗೆ, ಬೆಲ್ಲ(ಮೊಲಾಸಿಸ್) ಬೆರಿಸಿ ತಯಾರಿಸಿದ ಗೋಕೃಪಾಮೃತಕ್ಕೆ ಸಿಂಪರಣೆ ಇದಕ್ಕೆ ಒಂದು ಉದಾಹರಣೆಯಾಗಿದೆ. ಶಿರಕೋಳದ ರೈತರ ಮಲ್ಲಿಕಾರ್ಜುನ ಯಕ್ಕುಂಡಿಯವರ ಈರುಳ್ಳಿ ಹೊಲದಲ್ಲಿ ಗೋಕೃಪಾಮೃತ ತಯಾರಿಸುವ ಪ್ರಕ್ರಿಯೆನ್ನು ರೈತರಿಂದ ಆಲಿಸಿ, ಜಮೀನಿಗೆ ಗೋಕೃಪಾಮೃತವನ್ನು ಸಿಂಪಡಣೆ ಮಾಡಿದರು.
Kshetra Samachara
01/03/2021 01:23 pm